ನಟ ರಾಮ್ಚರಣ್ (Ram Charan) ನಿರ್ಮಾಣ ಮಾಡುತ್ತಿರವ ನಟ ನಿಖಿಲ್ ಸಿದ್ಧಾರ್ಥ ಅಭಿನಯದ ಮುಂಬರುವ ಚಿತ್ರ 'ದಿ ಇಂಡಿಯಾ ಹೌಸ್ ' ಚಿತ್ರೀಕರಣದ ಸೆಟ್‌ನಲ್ಲಿ ನೀರಿನ ಟ್ಯಾಂಕ್ ಸ್ಫೋಟಗೊಂಡು ದೊಡ್ಡ ಅಪಘಾತ ಸಂಭವಿಸಿದೆ.
ಈ ಘಟನೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಸಹಾಯಕ ಕ್ಯಾಮೆರಾಮನ್ ಮತ್ತು ಇತರ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರವಾಹಕ್ಕೆ ಸಿಲುಕಿದ ಚಿತ್ರದ ಸೆಟ್‌ಗಳ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಂಶಾಬಾದ್ ಬಳಿಯ ಸೆಟ್‌ನಲ್ಲಿ ಸಮುದ್ರದ ರೀತಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಚಿತ್ರೀಕರಣದ ಸಮಯದಲ್ಲಿ ನೀರಿನ ಟ್ಯಾಂಕ್ ಒಡೆದು ಪ್ರವಾಹ ಉಂಟಾದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
2023 ರಲ್ಲಿ, ರಾಮ್ ಚರಣ್ ತಮ್ಮ ಮೊದಲ ನಿರ್ಮಾಣ ಉದ್ಯಮ 'ದಿ ಇಂಡಿಯಾ ಹೌಸ್' ಅನ್ನು ಘೋಷಿಸಿದರು. ನಿಖಿಲ್ ಸಿದ್ಧಾರ್ಥ ಮತ್ತು ಅನುಪಮ್ ಖೇರ್ ಒಳಗೊಂಡ ಪ್ರೋಮೋವನ್ನು ಅನಾವರಣಗೊಳಿಸಿದ್ದರು. (ಏಜೆನ್ಸೀಸ್)