ನ್ಯೂಸ್

ದಯವಿಟ್ಟು ನನಗೆ ವಾಪಸ್​ ಕೊಡಿ: ತಮ್ಮ ಮನೆ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಂಡ ಮೊನಾಲಿಸಾ! Mona Lisa

Mona Lisa : ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಮಹಾಕುಂಭಮೇಳವು ಅತ್ಯಂತ ವೈಭವದಿಂದ ನಡೆಯುತ್ತಿದೆ. ಈ ಉತ್ಸವದಲ್ಲಿ ಭಾಗಿಯಾದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಅಂತಹವರಲ್ಲಿ ಮೊನಾಲಿಸಾ ಕೂಡ ಒಬ್ಬರು.

ಕುಂಭಮೇಳಕ್ಕೆ ಬಂದವರನ್ನು ತನ್ನ ಸುಂದರ ಕಣ್ಣುಗಳಿಂದಲೇ ಆಕರ್ಷಿಸಿದ ಜೇನುಗಣ್ಣಿನ ಸುಂದರಿ ಮೊನಾಲಿಸಾಗೆ ಸಂಬಂಧಿಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಮೊನಾಲಿಸಾ ಭೋಸ್ಲೆ ಹೆಸರಿನ ಎಕ್ಸ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಆಗಿದ್ದು, ಅದರಲ್ಲಿ ತಾವು ವಾಸಿಸುತ್ತಿರುವ ಸ್ಥಳ ಮತ್ತು ತಮ್ಮ ಮನೆಯನ್ನು ಮೊನಾಲಿಸಾ ತೋರಿಸಿದ್ದಾರೆ.

ನಿಮಗೆ ಗೊತ್ತಿರಬಹುದು ಇತ್ತೀಚೆಗೆ, ಯೂಟ್ಯೂಬರ್‌ಗಳು ಮೊನಾಲಿಸಾ ಅವರನ್ನು ಸಂದರ್ಶಿಸಲು ಅವರ ಹಿಂದೆ ಬಿದ್ದಿದ್ದಾರೆ. ಅಲ್ಲದೆ, ಅವರ ಕುರಿತಾದ ಸಾಕಷ್ಟು ವಿಡಿಯೊಗಳನ್ನು ಮಾಡಿದ್ದಾರೆ. ಹೀಗಾಗಿ ಮೊನಾಲಿಸಾ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದ್ದಾರೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ, ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ತುಂಬಾ ಖ್ಯಾತಿ ಗಳಿಸಿದ್ದಾರೆ. ಇದೇ ಖ್ಯಾತಿ ಆಕೆಗೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿತು. ಹೀಗಾಗಿ ರುದ್ರಾಕ್ಷಿ ಮಾರುವುದನ್ನು ಬಿಟ್ಟು ಮನೆಗೆ ಹಿಂದಿರುಗಿದ್ದಾರೆ.

ಎಕ್ಸ್​ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಾತನಾಡಿರುವ ಮೊನಾಲಿಸಾ, ನಾನು ಇಲ್ಲಿ ವಾಸಿಸುತ್ತಿದ್ದೇನೆ. ಇದು ನಮ್ಮ ಮನೆ. ಈ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ನಾನು ಮಣಿ ಹಾರಗಳನ್ನು ಮಾರಾಟ ಮಾಡಲು ಪ್ರಯಾಗರಾಜ್‌ಗೆ ಹೋಗಿದ್ದೆ. ಅಲ್ಲಿ ನನಗೆ ಹಾರಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅಲ್ಲದೆ, ಯಾರೋ ನನ್ನ ಇನ್‌ಸ್ಟಾಗ್ರಾಂ ಐಡಿಯನ್ನು ಹ್ಯಾಕ್ ಮಾಡಿದ್ದಾರೆ. ನನ್ನ ಐಡಿಯನ್ನು ಹ್ಯಾಕ್ ಮಾಡಿದವರು, ದಯವಿಟ್ಟು ನನ್ನ ಐಡಿಯನ್ನು ನನಗೆ ಹಿಂತಿರುಗಿಸಿ. ನಾನು ಅದರಿಂದ ಸ್ವಲ್ಪ ಹಣ ಗಳಿಸಲು ಬಯಸಿದ್ದೇನೆ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಮೊನಾಲಿಸಾ ತುಂಬಾ ಖ್ಯಾತಿ ಗಳಿಸುತ್ತಿದ್ದಂತೆ ಆಕೆಯ ಲಕ್​ ಕೂಡ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಮೂಲಕ ಹಣ ಗಳಿಕೆ ಮಾಡುತ್ತಿದ್ದಾರೆ. ಆಕೆಯ ವಿಡಿಯೋಗಳು ಇದೀಗ ಲಕ್ಷಾಂತರ ವೀಕ್ಷಣೆ ಪಡೆದುಕೊಳ್ಳುತ್ತಿವೆ. (ಏಜೆನ್ಸೀಸ್​)