Threat: ಮಹಾರಾಷ್ಟ್ರದ ಮಾಜಿ ಸಿಎಂ, ಹಾಲಿ ಡಿಸಿಎಂ ಆಗಿರುವ ಏಕನಾಥ್ ಶಿಂಧೆ ಕಾರನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಕಾಲ್ಗಳು ಬರುತ್ತಿವೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ Police ಇನ್ಸ್ಪೆಕ್ಟರ್ ಅಸಭ್ಯ ವರ್ತನೆ; Viral Video ಕುರಿತು ಅಧಿಕಾರಿಗಳು ಹೇಳಿದ್ದಿಷ್ಟು
ಗುರುವಾರ ಬೆಳಗ್ಗೆ ಇಲ್ಲಿನ ಗೋರೆಗಾಂವ್ ಮತ್ತು ಜೆಜೆ ಮಾರ್ಗ್ ಪೊಲೀಸ್ ಠಾಣೆಗಳಿಗೆ ಮತ್ತು ರಾಜ್ಯ ಸರ್ಕಾರ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ಬೆದರಿಕೆ ಕರೆ ಬಂದಿವೆ. ಕರೆ ಮಾಡಿದ ವ್ಯಕ್ತಿ ಏಕನಾಥ್ ಶಿಂಧೆ ಕಾರನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ರೋಹಿತ್ ಶರ್ಮ ಎಡವಟ್ಟು! ಅಕ್ಸರ್ ಪಟೇಲ್ ಹ್ಯಾಟ್ರಿಕ್ಗೆ ಮುಳುವಾದ ಟೀಮ್ ಇಂಡಿಯಾ ಕ್ಯಾಪ್ಟನ್ | Champions Trophy
ಮಾಧ್ಯಮಗಳ ವರದಿ ಪ್ರಕಾರ, ಏಕನಾಥ್ ಶಿಂಧೆ ಅವರಿಗೆ ಬೆದರಿಕೆ ಕರೆ ಬಂದ ಹಿನ್ನೆಲಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೇಖಾಗುಪ್ತ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಹಾ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಏಕನಾಥ್ ಶಿಂಧೆ ಭಾಗವಹಿಸಿದ್ದಾರೆ. (ಏಜೆನ್ಸೀಸ್)