ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ, ಜಮ್ಮು-ಕಾಶ್ಮಿರ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.
ರಿಕ್ಟರ್ ಮಾಪನದಲ್ಲಿ 5.7ರಷ್ಟು ತೀವ್ರತೆ ದಾಖಲಾಗಿದ್ದು, ಕಂಪನದ ಕೇಂದ್ರ ಬಿಂದು ಜಮ್ಮು-ಕಾಶ್ಮೀರದ ದೋಡಾ ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿ ತಿಳಿಸಿದೆ.
ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ತಾತ್ಕಾಲಿಕ, ಕೈಗಾರಿಕೋದ್ಯಮಿಗಳು ವಲಸೆ ಹೋಗುವ ಅವಶ್ಯಕತೆಯಿಲ್ಲ: ಸತೀಶ್ ಜಾರಕಿಹೊಳಿ
ಮಧ್ಯಾಹ್ನ 1:30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಯಿತು. ಕೂಡಲೇ ಮನೆಯಿಂದ ಹೊರಗೆ ಓಡಿ ಬಂದೆವು ಎಂದು ಶ್ರೀನಗರದ ನಿವಾಸಿ ಬಶೀರ್ ಎಂಬುವವರು ತಿಳಿಸಿದ್ಧಾರೆ.