lunare clipse : ಇದೇ ಸೆ.7ರಂದು ಆಗಸದಲ್ಲಿ ಗೋಚರಿಸುವ ರಕ್ತ ಚಂದ್ರ ಗ್ರಹಣಕ್ಕೆ ದಿನಗಣನೆ ಆರಂಭಗೊಂಡಿದೆ. ಈ ಬಗ್ಗೆ ಜನರು ತೀವ್ರ ಕುತೂಹಲ ಹೊಂದಿದ್ದಾರೆ. ಈ ದಿನ ಕೆಲವು ರಾಶಿಚಕ್ರಗಳಿಗೆ ಪ್ರಗತಿಯ ದಿನ ಆರಂಭವಾಗಲಿದೆಯಂತೆ. ಹಾಗಾದರೆ ಯಾವ ರಾಶಿಚಕ್ರದವರು ಚಂದ್ರಗ್ರಹಣದಿಂದ ಪ್ರಯೋಜನಗಳನ್ನು ಮತ್ತು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ ಎಂಬುದನ್ನು ತಿಳಿಯೋಣ.
ಈ ರಾಶಿಯವರಿಗೆ ಚಂದ್ರಗ್ರಹಣವು ನಿಮ್ಮ ವಿದೇಶ ಪ್ರವಾಸವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಶಿಕ್ಷಣದಲ್ಲಿಯೂ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಮತ್ತು ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡಿದರೆ ವ್ಯವಹಾರವು ಅಭಿವೃದ್ಧಿಗೊಳ್ಳಲಿದೆ. ನೀವು ಈ ಬಾಳೆಹಣ್ಣುಗಳನ್ನು ದಾನ ಮಾಡಿ.
ಮಕರ ರಾಶಿಯವರಿಗೆ ಈ ಗ್ರಹಣವು ಆರೋಗ್ಯದಲ್ಲಿ ಸುಧಾರಣೆ, ಉದ್ಯೋಗದಲ್ಲಿ ಸ್ಥಿರತೆಯನ್ನು ತರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ನಿಮ್ಮ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಮಕರ ರಾಶಿಯವರು ಶನಿಯ ಮಂತ್ರವನ್ನು ಜಪಿಸಬೇಕು.
ಮೇಷ ರಾಶಿಯವರಿಗೆ ಚಂದ್ರ ಗ್ರಹಣವು ಹಣದ ಲಾಭವನ್ನು ತರಲಿದೆಯಂತೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಆರಂಭವಾಗಲಿದ್ದು, ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಮತ್ತು ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಎನ್ನಲಾಗಿದೆ. ಹಾಗಾಗಿ ಮೇಷ ರಾಶಿಯವರು ಹನುಮಾನ್ ಚಾಲೀಸಾವನ್ನು ಪಠಣ ಮಾಡಬೇಕು.
ವೃಶ್ಚಿಕ ರಾಶಿಯವರಿಗೆ ಚಂದ್ರಗ್ರಹಣದಿಂದ ವೃತ್ತಿಯಲ್ಲಿನ ಪ್ರಗತಿಗೆ ಅವಕಾಶಗಳು ಸಿಗಲಿವೆ. ಈ ದಿನದಿಂದ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದ್ದು, ಸ್ಥಗಿತಗೊಂಡ ಯೋಜನೆಗಳು ಮತ್ತೆ ಆರಂಭವಾಗುತ್ತವೆ. ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಈ ದಿನ ವೃಶ್ಚಿಕ ರಾಶಿಯವರು ಹನುಮಂತನಿಗೆ ಬೆಲ್ಲವನ್ನು ಸಮರ್ಪಿಸಬೇಕು.
(ಏಜೆನ್ಸೀಸ್)
ಕನ್ಯಾ ರಾಶಿಯವರಿಗೆ ಚಂದ್ರಗ್ರಹಣವು ಉತ್ತಮ ಅವಕಾಶಗಳನ್ನು ತರಲಿದೆ. ಇದು ಆರ್ಥಿಕ ಲಾಭಗಳ ಜೊತೆಗೆ ಯಶಸ್ಸಿಗೂ ಕಾರಣವಾಗಲಿದೆ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಸಮಸ್ಯೆಗಳು ಪರಿಹಾರವಾಗುತ್ತವೆ. ಕನ್ಯಾ ರಾಶಿಯವರು ದುರ್ಗಾ ಮಾತೆಯನ್ನು ಪೂಜಿಸಬೇಕು.