Shreyas Iyer | ಅಂದು ತಿರಸ್ಕಾರ, ಇಂದು ಪುರಸ್ಕಾರ; ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಶ್ರೇಯಸ್​ ಅಯ್ಯರ್​ ನಾಯಕ!

Shreyas Iyer
Published on

Shreyas Iyer: ಸೆಪ್ಟೆಂಬರ್ 16 ರಿಂದ ಲಕ್ನೋದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಬಹುದಿನಗಳ ಪಂದ್ಯಗಳಿಗೆ ಭಾರತ ಎ ತಂಡವನ್ನು ಪ್ರಕಟಿಸಿದ್ದು, ನಾಯಕನನ್ನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ.

ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಭಾರತದ ಏಷ್ಯಾ ಕಪ್ ತಂಡದಿಂದ ಕೈಬಿಟ್ಟ ಕೆಲವೇ ದಿನಗಳ ನಂತರ ಅಯ್ಯರ್ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ಈ ತಂಡದಲ್ಲಿ ಹೆಚ್ಚು ಹಿರಿಯರ ಆಟಗಾರರಿಗೆ ಮಣೆ ಹಾಕಿಲ್ಲ, ಶ್ರೇಯಸ್ ಅಯ್ಯರ್ ಮತ್ತೆ ಟೆಸ್ಟ್​​ ತಂಡಕ್ಕೆ ಮರಳಲು ಈ ಟೂರ್ನಿ ಪ್ರಮುಖವಾಗಲಿದ್ದು, ಅಕ್ಟೋಬರ್ ಆರಂಭದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ. ಅಯ್ಯರ್​ ಆಸ್ಟ್ರೇಲಿಯಾ ತಂಡದ ವಿರುದ್ಧ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವುದರ ಮೇಲೆ ಅವರ ಮುಂದಿನ ದಾರಿ ನಿರ್ಣಯವಾಗುತ್ತದೆ. ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಯುಷ್ ಬಡೋನಿ, ತನುಷ್ ಕೋಟ್ಯಾನ್, ಹರ್ಷ್ ದುಬೆ, ಮಾನವ್ ಸುತಾರ್, ಎನ್ ಜಗದೀಶನ್ ಮತ್ತು ಗುರ್ನೂರ್ ಬ್ರಾರ್​​ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಸುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ಬಹುದಿನಗಳ ಪಂದ್ಯಗಳು ಲಕ್ನೋದಲ್ಲಿ ನಡೆಯಲಿದ್ದು, ಭಾರತ ಎ ತಂಡವು ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು ಅಕ್ಟೋಬರ್ 5 ರಂದು ಆಸ್ಟ್ರೇಲಿಯಾ ಎ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಏಕದಿನ ಪಂದ್ಯಗಳು ಕಾನ್ಪುರದಲ್ಲಿ ನಡೆಯಲಿವೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸರ್ಫರಾಜ್ ಖಾನ್ ಭಾರತ ಎ ತಂಡದಿಂದ ಹೊರಗುಳಿದಿದ್ದಾರೆ.(ಏಜೆನ್ಸೀಸ್​​)

ಭಾರತ ಎ ತಂಡ: ಶ್ರೇಯಸ್ ಅಯ್ಯರ್ (ಸಿ), ಅಭಿಮನ್ಯು ಈಶ್ವರನ್, ಎನ್ ಜಗದೀಶನ್, ಸಾಯಿ ಸುದರ್ಶನ್, ಧ್ರುವ್ ಜುರೆಲ್ (ವಿಸಿ ಮತ್ತು ವಿಕಿ), ದೇವದತ್ ಪಡಿಕ್ಕಲ್, ಹರ್ಷ್ ದುಬೆ, ಆಯುಷ್ ಬಡೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಪ್ರಸ್ಲೀದ್ ಕೃಷ್ಣ, ಗುರ್ನೂರ್ ಬ್ರಾರ್​​ಗೆ, ಖಲೀಲ್​ ಅಹ್ಮದ್​​, ಮಾನವ್​ ಸುತಾರ್​, ಯಶ್​ ಠಾಕೂರ್​​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net