ಸಾಂದರ್ಭಿಕ ಚಿತ್ರ 
ನ್ಯೂಸ್

ಲಕ್ಕಿ ಲಾಟರಿ ಡ್ರಾ ಹೆಸರಿನಲ್ಲಿ ಚಿಂತಾಮಣಿ ಯುವತಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಂತಾಮಣಿ: ಲಕ್ಕಿ ಲಾಟರಿ ಡ್ರಾ ಹೆಸರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿತಾಲೂಕಿನ ಮಣಿಗಾನಹಳ್ಳಿಯ ಯುವತಿಯಿಂದ ವಂಚಕರು 4.87 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ.

ಲಾಟರಿಯಲ್ಲಿ 2.20 ಕೋಟಿ ರೂಪಾಯಿ ಬಂದಿದೆ ಎಂದು ಯುವತಿ ರುಕ್ಮಿಣಿಯನ್ನ ನಂಬಿಸಿದ ವಂಚಕರು, ಆಕೆಯಿಂದ ತೆರಿಗೆ ಶುಲ್ಕ ಸೇರಿದಂತೆ ನಾನಾ ನಿರ್ವಹಣೆಯ ವೆಚ್ಚದ ಹೆಸರಿನಲ್ಲಿ ಬರೋಬ್ಬರಿ 4.87 ಲಕ್ಷ ರೂ. ಅನ್ನು ತಮ್ಮ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪದೇಪದೆ ಏನೇನೋ ಶುಲ್ಕ ಎಂದು ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡ ಯುವತಿ ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.

ಚಿಕ್ಕಬಳ್ಳಾಪುರ ಸೈಬರ್​ ಠಾಣೆಗೆ ರುಕ್ಮಿಣಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.