ನ್ಯೂಸ್

ಪ್ರೀತಿಯಲ್ಲಿ ಸಮಸ್ಯೆ! ಸಾಯಲು ನೀರಿಗೆ ಜಿಗಿದ ಪ್ರೇಮಿಗಳಿಗೆ ಕಾದಿತ್ತು ಕಪಾಳ ಮೋಕ್ಷ; ವಿಡಿಯೋ ನೋಡಿ

ಮೋಹನ್​ ಶೆಟ್ಟಿ

ಪ್ರೀತಿಯಲ್ಲಿ ದುಃಖ, ಮೋಸ ಹೋಗುವುದು ಸಾಮಾನ್ಯ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ, ಇನ್ನೇನು ಮದುವೆಯಾಗಬೇಕು ಎಂದು ನಿರ್ಧರಿಸಿದಾಗ, ಹೆತ್ತವರ ಒಪ್ಪಿಗೆ ಸಿಗದಿದ್ದಾಗ, ದುಡುಕಿ ನಿರ್ಧಾರ ಕೈಗೊಳ್ಳುವುದು ತೀರ ಸಾಮಾನ್ಯ. ಆದರೆ, ಇನ್ನು ಕೆಲ ಹುಚ್ಚು ಪ್ರೇಮಿಗಳು, ತಮ್ಮಲ್ಲಿ ಜಗಳ ಅಥವಾ ಮನಸ್ತಾಪ ಉಂಟಾದರೆ ಸಾಕು ಸಾಯುವ ಮಾತು ಬಿಟ್ಟರೆ ಬೇರೇನೂ ನುಡಿಯುವುದಿಲ್ಲ. ಈ ವಿಡಿಯೋದಲ್ಲಿರುವ ಜೋಡಿ ಕೂಡ ಯಾಕೋ ಇದೇ ರೀತಿಯಂತೆ ಕಾಣುತ್ತಾರೆ.

ಉತ್ತರಪ್ರದೇಶದ ಸುಲ್ತಾನ್​ಪುರದಲ್ಲಿ ಇಬ್ಬರು ಪ್ರೇಮಿಗಳು ಸಾಯುವ ನಿರ್ಧಾರ ಕೈಗೊಂಡು, ನೀರಿಗೆ ಜಿಗಿದಿದ್ದಾರೆ. ಈ ವೇಳೆ ನೀರಿನಲ್ಲಿ ಮೀನು ಹಿಡಿಯಲು ಬಲೆ ಬೀಸಿ, ಅಲ್ಲೇ ಕುಳಿತ್ತಿದ್ದ ಮೀನುಗಾರರು ಇವರಿಬ್ಬರನ್ನು ಕಂಡು ನದಿಗೆ ಜಿಗಿದಿದ್ದಾರೆ. ಇಬ್ಬರನ್ನು ಸಾವಿನ ದವಡೆಯಿಂದ ರಕ್ಷಿಸಿದ ಮೀನಗಾರರ ಬಳಗ, ಯುವತಿ ಮತ್ತು ಯುವಕನನ್ನು ದಡಕ್ಕೆ ಕರೆತಂದು ನಂತರ ಕ್ಲಾಸ್ ತೆಗೆದುಕೊಂಡಿದೆ.

ನೀರಿಗೆ ಜಿಗಿದ ಯುವಕನನ್ನು ದಡಕ್ಕೆ ಎಳೆದೊಯ್ದ ಮೀನಗಾರರೊಬ್ಬರು, ಆತನಿಗೆ ಮೂರು ಬಾರಿ ಕಪಾಳ ಮೋಕ್ಷ ಮಾಡುವ ಮೂಲಕ ಸಾಯುವಂತ ನಿರ್ಧಾರ ಏಕೆ ತೆಗೆದುಕೊಂಡೆ ಎಂದು ತಮ್ಮ ಶೈಲಿಯಲ್ಲಿ ಬುದ್ಧಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.