More

  ಗುಣಶ್ರೀ ಶಾಲೆಯಲ್ಲಿ ರಾಷ್ಟ್ರಭಕ್ತಿ ಬೋಧನೆ: ಮಾಜಿ ಸಚಿವ ನಾಗರಾಜ ಶೆಟ್ಟಿ ಶ್ಲಾಘನೆ

  ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗೆ ಕೂಡ ಗುಣಮಟ್ಟದ ಶಿಕ್ಷಣ ಜತೆಗೆ ರಾಷ್ಟ್ರಭಕ್ತಿ ಹಾಗೂ ದೇಶೀಯ ಸಂಸ್ಕೃತಿ ಅರಿವು ಮೂಡಿಸುವ ಪ್ರಯತ್ನ ಗುಣಶ್ರೀ ವಿದ್ಯಾಲಯ ಮಾಡುತ್ತಿದೆ ಎಂದು ಗುಣಶ್ರೀ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.

  ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಗುರುವಾರ ಎಲ್‌ಕೆಜಿ- ಯುಕೆಜಿ ತರಗತಿ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.

  ಮಕ್ಕಳಿಗೆ ಗುಲಾಬಿ ಹೂವು ಮತ್ತು ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಗೊಂಬೆ ಹಾಗೂ ಯಕ್ಷಗಾನ ವೇಷದಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ಟ್ರಸ್ಟಿ ವಿಜಯಕುಮಾರ್ ಚೌಟ, ಪ್ರಾಂಶುಪಾಲೆ ಲಾವಣ್ಯ, ಮುಖ್ಯಶಿಕ್ಷಕಿ ಜಯಶ್ರೀ, ಆಡಳಿತಾಧಿಕಾರಿ ಪೂಜಾ, ಉಪನ್ಯಾಸಕಿ ಅನುಷಾ ಶೆಟ್ಟಿ ಶುಭ ಹಾರೈಸಿದರು. ರೇಶ್ಮಲತಾ ಸ್ವಾಗತಿಸಿದರು. ಫ್ಲೇವಿ ಡಿಸೋಜ ಕೊಯಿಲ ವಂದಿಸಿದರು. ಮಣಿ ಕಾರ್ಯಕ್ರಮ ನಿರೂಪಿಸಿದರು.

  See also  ನಮ್ಮ ವರದಿ ನೈಜವಾಗಿ, ವೈಜ್ಞಾನಿಕವಾಗಿದೆ: ಎಲ್ಲಾ ವದಂತಿಗೆ ತೆರೆ ಎಳೆದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts