ನ್ಯೂಸ್

ರಸ್ತೆಯಲ್ಲೇ ಸುಟ್ಟು ಕರಕಲಾದ ಲಾರಿ, ಚಾಲಕನ ಬುರುಡೆ ಮಾತ್ರ ಕಾಣ್ತಿದೆ..!

ರಾಯಚೂರು: ಅದಿರು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, ಲಾರಿ ಚಾಲಕ ಜೀವಂತ ದಹನವಾಗಿದ್ದಾನೆ.

ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ 3ರ ಸುಮಾರಿನಲ್ಲಿ ಈ ಅವಘಡ ಸಭಂವಿಸಿದೆ. ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕುಷ್ಟಗಿ ಮೂಲದ ಚಾಲಕ ಬಾಲಾಜಿ(25) ತಲೆಬುರುಡೆಯಷ್ಟೇ ಸಿಕ್ಕಿದೆ.

ಬಳ್ಳಾರಿಯ ಮರಿಯಮ್ಮನ ಹಳ್ಳಿಯಿಂದ ತೆಲಂಗಾಣದ ಶಾದ್ ನಗರಕ್ಕೆ ಮೈನ್ಸ್​ ತುಂಬಿಕೊಂಡು ಹೊರಟಿದ್ದ ಲಾರಿಯಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದರ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.