ನ್ಯೂಸ್

ಲಂಚ ಪಡೆದು ಎಸ್ಕೇಪ್​ ಆಗುತ್ತಿದ್ದ ಭ್ರಷ್ಟನನ್ನು ಸಿನಿಮಾ ಸ್ಟೈಲ್​ನಲ್ಲಿ ಚೇಸ್​ ಮಾಡಿ ಹಿಡಿದ ಲೋಕಾಯುಕ್ತ ಅಧಿಕಾರಿಗಳು!

ಬೆಂಗಳೂರು: ಲಂಚ ಪಡೆದು ಎಸ್ಕೇಪ್​ ಆಗುತ್ತಿದ್ದ ಭ್ರಷ್ಟ ಅಧಿಕಾರಿಯೊಬ್ಬನನ್ನು ಲೋಕಾಯುಕ್ತ ಅಧಿಕಾರಿಗಳು ಸಿನಿಮಾ ಶೈಲಿಯಲ್ಲಿ ಕಾರಿನಲ್ಲಿ ಚೇಸ್​ ಮಾಡಿ ಹಿಡಿದಿರುವ ಘಟನೆ ನಗರದಲ್ಲಿ ನಡೆದಿದೆ.

ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ 

ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟನನ್ನು ಮಹಂತೇ ಗೌಡ ಎಂದು ಗುರುತಿಸಲಾಗಿದೆ. ಕೆ.ಜಿ ಸರ್ಕಲ್ ಬಳಿಯಿರುವ ತಹಸೀಲ್ದಾರ್ ಕಚೇರಿಯಲ್ಲಿ ಮಹಂತೇ ಗೌಡ ಆಹಾರ ನಿರೀಕ್ಷಕರಾಗಿದ್ದಾರೆ. ಟ್ರೇಡ್​ ಲೈಸೆನ್ಸ್​ ನೀಡಲು ರಂಗದಾಮಯ್ಯ ಎಂಬುವವರ ಬಳಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ.

15 ಕಿ.ಮೀ. ಚೇಸ್ 

45 ಸಾವಿರ ರೂ. ಹಣವನ್ನು ಪಡೆಯುವಾಗ ಮಹಂತೇ ಗೌಡನನ್ನು ಬಲೆಗೆ ಕೆಡವಲು ಲೋಕಾಯುಕ್ತ ತಂಡ ತೆರಳಿತ್ತು. ಬಲೆಗೆ ಬೀಳುತ್ತಿದ್ದೇನೆ ಎಂದು ಗೊತ್ತಾದ ಕೂಡಲೇ ಮಹಂತೇ ಗೌಡ ಹಣ ಪಡೆದು ಅಲ್ಲಿಂದ ಕಾರಿನ ಮೂಲಕ ಎಸ್ಕೇಪ್​ ಆಗಲು ಯತ್ನಿಸಿದಾಗ ಸುಮಾರು 15 ಕಿ.ಮೀ. ಚೇಸ್ ಮಾಡಿ ಆತನನ್ನು ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.

ನೆಲಮಂಗಲ ಬಳಿಯ ಸೊಂಡೇ‌ಕೊಪ್ಪ ಬಳಿ ಮಹಂತೇ ಗೌಡ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಆತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)