ಮಂಡ್ಯ: ದೇಶದ ಲಿಥಿಯಂ ಗಣಿಗಾರಿಕೆಯಲ್ಲಿ ಸೋಮವಾರದಂದು ಒಂದು ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಕರ್ನಾಟಕದ ಮಂಡ್ಯದ ಮರ್ಲಗಲ್ಲ-ಅಲಪಟ್ಟಣ ಭಾಗದಲ್ಲಿ ಲಿಫತಿಯಂ ನಿಕ್ಷೇಪ ಪತ್ತೆಯಾಗಿದೆ. ಇದು ಭಾರತದಲ್ಲಿ ಪತ್ತೆಯಾದ ಮೊದಲ ಲಿಥಿಯಂ ನಿಕ್ಷೇಪವಾಗಿದೆ.
ಕೇಂದ್ರದ ಪರಮಾಣು ಶಕ್ತಿ ಇಲಾಖೆಯ (ಡಿಎಇ) ಒಂದು ಅಂಗವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎಎಮ್‌ಡಿ)ಯ ಪ್ರಾಥಮಿಕ ಸಮೀಕ್ಷೆಯಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ. ಇದರ ಜತೆಯಲ್ಲಿ ರಾಜಸ್ಥಾನ ಮತ್ತು ಗುಜರಾತ್‌ನ ಉಪ್ಪುನೀರಿನ ಪೂಲ್‌ಗಳಿಂದ ಮತ್ತು ಒಡಿಶಾ ಹಾಗೂ ಚತ್ತೀಸಗಢದ ಮೈಕಾ ಬೆಲ್ಟ್‌ಗಳಿಂದ ಲಿಥಿಯಂನ್ನು ಹೊರತೆಗೆಯಲು ಪರಿಶೋಧನಾ ಕಾರ್ಯಗಳನ್ನು ನಡೆಸಲಾಗುತ್ತಿದೆ.
ಮಂಡ್ಯದಲ್ಲಿ 1600 ಟನ್ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ದೊಡ್ಡ ದೊಡ್ಡ ಲಿಥಿಯಂ ಗಣಿಗಳಿಗೆ ಹೋಲಿಸಿದರೆ ಇದು ಬಹಳ ಸಣ್ಣ ಪ್ರಮಾಣವೆನ್ನಬಹುದು. ಆದರೂ ಬೇರೆ ದೇಶಗಳಿಂದ ಲಿಥಿಯಂ ಆಮದು ತಗ್ಗಿಸಬೇಕು ಎಂದು ಪ್ರಯತ್ನಿಸುತ್ತಿರುವ ಭಾರತಕ್ಕೆ ಇದು ಒಂದು ಉತ್ತಮ ಆವಿಷ್ಕಾರವೇ ಎಂದು ಪರಿಣತರು ತಿಳಿಸಿದ್ದಾರೆ. (ಏಜೆನ್ಸೀಸ್)