ನ್ಯೂಸ್

ವಿಶ್ವದ ಟಾಪ್​ 100 ಖಾದ್ಯಗಳ ಪಟ್ಟಿ ಬಿಡುಗಡೆ; ಹೈದರಾಬಾದ್​ ಬಿರಿಯಾನಿ ಸೇರಿ 4 ಭಾರತೀಯ ಖಾದ್ಯಕ್ಕೆ ಸ್ಥಾನ

ನವದೆಹಲಿ​: ಹೈದರಾಬಾದ್​ ಬಿರಿಯಾನಿ ಸೇರಿದಂತೆ ಇತರೆ ಮೂರು ಭಾರತೀಯ ಖಾದ್ಯಗಳು ವಿಶ್ವದ ಟಾಪ್​ 100 ರ ಖಾದ್ಯಗಳಲ್ಲಿ ಸ್ಥಾನ ಪಡಿದಿಕೊಂಡಿವೆ.

ಜಾಗತಿಕ ಪ್ರಯಾಣ ಮತ್ತು ಅಹಾರ ಮಾರ್ಗದರ್ಶಿಯಾದ 'ಟೇಸ್ಟ್​​ ಅಟ್ಲಾಸ್'​ ಎನ್ನುವ ವರದಿ ಈ 100ರ ಪಟ್ಟಿ ಬಿಡಿಗಡೆ ಮಾಡಿದೆ. ಭಾರತದ ಫೇಮಸ್​ ಹೈದರಾಬಾದ್​ ಬಿರಿಯಾನಿ ವಿಶ್ವದ 100ರ ಪಟ್ಟಿಯಲ್ಲಿ 31ನೇ ಸ್ಥಾನ ಪಡೆದಿದೆ. ಅದರಂತೆ ಇತರೆ ಖಾದ್ಯಗಳಾದ ಬಟರ್​ ಚಿಕಾನ್​ ಎಂದೇ ಖ್ಯಾತಿ ಪಡೆದಿರುವ ಮುರ್ಗ್​ ಮಖಾನಿ, ಚಿಕನ್​ 65 ಮತ್ತು ಕೀಮಾ ಕೂಡ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ವರಿದಿಯಾಗಿದೆ.

ಟೇಸ್ಟ್​​ ಅಟ್ಲಾಸ್ 100ರ ಆಗ್ರ ಪಟ್ಟಿಯಲ್ಲಿ ಭಾರತೀಯ ಖಾದ್ಯಗಳ ಸ್ಥಾ

1.ಮೂರ್ಗ್​ ಮುಖಾನಿ(29ನೇ ಸ್ಥಾನ)

2.ಹೈದರಾಬಾದ್​ ಬಿರಿಯಾನಿ(31ನೇ ಸ್ಥಾನ)

3.ಚಿಕನ್​ 65(97ನೇ ಸ್ಥಾನ)

4.ಕೀಮಾ(100ನೇ ಸ್ಥಾನ)

ಹೈದರಾಬಾದ್​ ಬಿರಿಯಾನಿ ಭಾರತದ್ಯಾಂತ ಪ್ರಸಿದ್ಧಿ ಪಡೆದಿದೆ. ಹೈದರಾಬಾದ್​ ನಿಜಾಮರ ಆಳ್ವಿಕೆ ಕಾಲದಲ್ಲಿ ಆರಂಭವಾದ ಈ ಖಾದ್ಯ ಅಂದಿನ ರಾಜರಿಗೆ ಫೇವರೆಟ್​​ ಆಹಾರ ಎಂದು ಇತಿಹಾಸದ ಉಲ್ಲೇಖ. ಅಂದಿನಿಂದ ಇಂದಿನವರೆಗೂ ಬಿರಿಯಾನಿ ಖಾದ್ಯ ತಮ್ಮ ರುಚಿಯನ್ನು ಕಳೆದುಕೊಂಡಿಲ್ಲ. ಹೈದರಾಬಾದ್​​ ನಗರವೇ ಇಂದಿಗೂ ಬಿರಿಯಾನಿಗೆ ಪ್ರಸಿದ್ಧಿ ಪಡೆದಿದೆ. ನಗರದ ಪ್ರತಿ ಬಡವಾಣೆ ಮತ್ತು ಓಣಿ(ಸ್ಟ್ರೀಟ್​)ಗಳಲ್ಲಿ ಕೂಡ ಬಿರಿಯಾನಿ ಸಿಗುತ್ತದೆ. ಇನ್ನು ಇದೀಗ, ವಿಶ್ವದ 100ರ ಆಗ್ರ ಪಟ್ಟಿಯಲ್ಲಿ ಭಾರತೀಯ 31ನೇ ಸ್ಥಾನ ಪಡೆಯುವ ಮೂಲಕ ವಿಶ್ವದ ಆಹಾರ ಪ್ರೀಯರ ಗಮನ ಸೆಳೆದಿದೆ.

ಬಿರಿಯಾನಿ ಮಾತ್ರವಲ್ಲ ಬಟರ್​ ಚಿಕನ್​, ಚಿಕನ್​ 65 ಮತ್ತು ಕೀಮಾ ಕೂಡ ವಿಶ್ವದಲ್ಲಿ ಸ್ಥಾನ ಪಡೆಯುವ ಮೂಲಕ ಆಹಾರ ಪ್ರೀಯರ ಮನಗೆದ್ದಿವೆ,(ಏಜೆನ್ಸೀಸ್​).