ನ್ಯೂಸ್

'ಕಿರಿಕ್ ಪಾರ್ಟಿ'ಯಿಂದ ಟಾಲಿವುಡ್​ ಅಂಗಳಕ್ಕೆ; ಇಲ್ಲಿದೆ ನೋಡಿ ರಶ್ಮಿಕಾ ಮಂದಣ್ಣ ನಟಿಸಿದ ತೆಲುಗು ಸಿನಿಮಾಗಳ ಪಟ್ಟಿ

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್​ಬಸ್ಟರ್​ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ನಂತರ ಕಂಡಿದ್ದೆಲ್ಲಾ ಅದ್ಭುತ ಯಶಸ್ಸು. ಕಿರಿಕ್ ಪಾರ್ಟಿ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಪುನೀತ್ ರಾಜ್​ಕುಮಾರ್​ ಅವರ 'ಅಂಜನಿಪುತ್ರ', ಗಣೇಶ್ ನಟನೆಯ 'ಚಮಕ್' ಮತ್ತು ದರ್ಶನ್​ ಅಭಿನಯದ 'ಯಜಮಾನ' ಚಿತ್ರಗಳಲ್ಲಿ ಮಿಂಚಿದ 'ನ್ಯಾಷನಲ್ ಕ್ರಶ್'​, ನಂತರ ಜಿಗಿದಿದ್ದು ನೇರವಾಗಿ ಟಾಲಿವುಡ್​ ಅಂಗಳಕ್ಕೆ.

ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ಗುರುತಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ನಂತರದಲ್ಲಿ ತಮ್ಮ ನಟನೆಯ ಛಾಪನ್ನು ತೆಲುಗು ಸಿನಿಮಾಗಳ ಮುಖೇನ ಪ್ರೇಕ್ಷಕರಿಗೆ ಮತ್ತಷ್ಟು ಪರಿಚಯಿಸಿದರು. ತಿಳಿಯದ ಭಾಷೆಯಾದರೂ ತಮ್ಮ ನಟನಾ ಕೌಶಲ್ಯ ತೋರಿಸುವಲ್ಲಿ ಹಿಂದುಳಿಯದ ರಶ್ಮಿಕಾ, ಟಾಲಿವುಡ್​ನ ಅಲ್ಲು ಅರ್ಜುನ್​, ಮಹೇಶ್​ ಬಾಬು, ವಿಜಯ್ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್​ ನಟರೊಂದಿಗೆ ನಟಿಸಿ, ತೆಲುಗು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಇದೀಗ ಬಾಲಿವುಡ್​ನಲ್ಲಿಯೂ ನಟಿಸಿರುವ ನ್ಯಾಷನಲ್ ಕ್ರಶ್, ಅಪಾರ ಪ್ರಶಂಸೆ, ಮನ್ನಣೆ ಗಳಿಸಿದ್ದಾರೆ. ಗಮನಾರ್ಹವಾಗಿ ನಟಿಯ ಕೊಡುಗೆ ಟಾಲಿವುಡ್​ ಚಿತ್ರರಂಗಕ್ಕೆ ಹೆಚ್ಚಿದ್ದು, ಅವರು ಅಭಿಯಸಿರುವ ಅಷ್ಟು ತೆಲುಗು ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಒಟ್ಟು 9 ಸಿನಿಮಾಗಳಲ್ಲಿ ನಟನೆ

1. ಚಲೋ (2018): ನಿರ್ದೇಶಕ ವೆಂಕಿ ಕುಡುಮಾಲ, ನಾಯಕಿ ರಶ್ಮಿಕಾ ಮಂದಣ್ಣ, ನಾಯಕ ನಾಗ ಶೌರ್ಯ.

2. ಗೀತಾ ಗೋವಿಂದಂ (2018): ನಿರ್ದೇಶಕ ಪರಶುರಾಮ್, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ವಿಜಯ್ ದೇವರಕೊಂಡ

3. ದೇವದಾಸ್ (2018): ನಿರ್ದೇಶಕ ಶ್ರೀರಾಮ್ ಆದಿತ್ಯ, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟರು ನಾನಿ, ನಾಗಾರ್ಜುನ ಅಕ್ಕಿನೇನಿ

4. ಡಿಯರ್ ಕಾಮ್ರೇಡ್ (2019): ನಿರ್ದೇಶಕ ಭರತ್ ಕಮ್ಮ, ನಟಿ

ರಶ್ಮಿಕಾ ಮಂದಣ್ಣ, ನಾಯಕ ನಟ ವಿಜಯ್ ದೇವರಕೊಂಡ

5. ಸರಿಲೇರು ನೀಕೆವ್ವರು (2020): ನಿರ್ದೇಶಕ ಅನಿಲ್ ರವಿಪುಡಿ,

ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಮಹೇಶ್ ಬಾಬು

6. ಭೀಷ್ಮ (2020): ನಿರ್ದೇಶಕ ವೆಂಕಿ ಕುಡುಮಲ,

ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ನಿತಿನ್

7. ಪುಷ್ಪ: ದಿ ರೈಸ್ (2021) ನಿರ್ದೇಶಕ ಸುಕುಮಾರ್,

ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಅಲ್ಲು ಅರ್ಜುನ್,

8. ಆದವಲ್ಲು ಮೀಕು ಜೋಹಾರ್ಲು (2022): ನಿರ್ದೇಶಕ ಕಿಶೋರ್ ತಿರುಮಲ, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಶರ್ವಾನಂದ್

9. ಪುಷ್ಪ 2 (2024): ನಿರ್ದೇಶಕ ಸುಕುಮಾರ್​, ನಟಿ ರಶ್ಮಿಕಾ ಮಂದಣ್ಣ, ನಾಯಕ ನಟ ಅಲ್ಲು ಅರ್ಜುನ್ (ಡಿ.05ರಂದು ಬಿಡುಗಡೆಗೆ ಸಿದ್ಧವಾಗಿದೆ)​.