ಬೆಂಗಳೂರು: ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇಂದಿನಿಂದ ಮದ್ಯ ತುಟ್ಟಿಯಾಗಲಿದ್ದು , ಶೇ. 20 ರಷ್ಟು ದರ ಹೆಚ್ಚಳ ಆಗಲಿದೆ.
ಇದೀಗ ಬಿಯರ್ ಬೆಲೆಯನ್ನು 10% ಏರಿಕೆ ಮಾಡಲಾಗಿದ್ದು ಇತರ ಮದ್ಯಗಳ ಬೆಲೆ 20%ನಷ್ಟು ಏರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಂತೆ ಮದ್ಯದ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಸಂಪನ್ಮೂಲ ಕ್ರೋಢ್ರೀಕರಣ ಮಾಡುವ ದೃಷ್ಟಿಯಿಂದ ಮದ್ಯದ ಬೆಲೆ ಏರಿಕೆ ಮಾಡುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಉಚಿತ ಮದ್ಯ ನೀಡುವಂತೆ ಆಗ್ರಹಿಸಿ ವಿನೂತನ ಪ್ರತಿಭಟನೆ!