ನ್ಯೂಸ್

ಪೊಲೀಸ್​ ಠಾಣೆಗೆ ಭೇಟಿ ನೀಡಿದ ಚಿರತೆ!; ಏಕಾಏಕಿ ಬಂದ ಅತಿಥಿ ನೋಡಿ ಕಕ್ಕಾಬಿಕ್ಕಿಯಾದ ಅಧಿಕಾರಿಗಳು: ವಿಡಿಯೋ ಇಲ್ಲಿದೆ.. | Leopard

Leopard : ತಮಿಳುನಾಡಿನ ಪೊಲೀಸ್​ ಠಾಣೆಯಲ್ಲಿ ಚಿರತೆಯೊಂದು ಏಕಾಏಕಿ ಕಂಡುಬಂದಿದ್ದು, ಪೊಲೀಸ್​ ಅಧಿಕಾರಿಗಳು ಭಯಭೀತಿಗೊಂಡಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಯೊಳಗೆ ಚಿರತೆಯೊಂದು ನಿಧಾನವಾಗಿ ಓಡಾಡುವುದನ್ನು ಸಿಸಿಟಿವಿ ಕ್ಯಾಮೆರಾ ಸೆರೆಯಾಗಿದ್ದು, ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿರೊದೇನು..?

ಠಾಣೆಯೊಳಗೆ ಚಿರತೆ ಬಂದಿರುವುದನ್ನು ಸಿಸಿಟಿವಿಯಲ್ಲಿ ಗುರುತಿಸಿದ ಸಿಬ್ಬಂದಿ, ಮೊದಲ ಕೋಣೆಗೆ ಹೋದ ಚಿರತೆಯನ್ನು ನೋಡಿದ ಸಿಬ್ಬಂದಿ ಚಿರತೆಯನ್ನು ಕೋಣೆಯಲ್ಲಿ ಲಾಕ್​ ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಹೋಗಾಗಿ, ಪ್ರಾಣಿ ಇನ್ನೂ ಇದೆಯೇ ಎಂದು ಎಚ್ಚರಿಕೆಯಿಂದ ತುದಿಗಾಲಲ್ಲಿ ನಿಂತು ಇಣುಕುತ್ತಾನೆ. ಭಯಭೀತನಾಗಿ, ಸಿಬ್ಬಂದಿ ಕೋಣೆಯ ಬಾಗಿಲಿನ ಹಿಂದೆ ನಿಂತು ಚಿರತೆಯನ್ನು ನೋಡಲು ಹೊರಗೆ ನೋಡುತ್ತಾನೆ. ನಂತರ ಅವನು ಹೊರಗೆ ನಡೆದು ಪ್ರಾಣಿ ಹೊರಟು ಹೋಗಿರುವುದನ್ನು ಕಂಡುಕೊಳ್ಳುತ್ತಾನೆ. ಅವನು ಒಳಗೆ ಧಾವಿಸಿ ಬಾಗಿಲು ಮುಚ್ಚಿಕೊಳ್ಳುತ್ತಾನೆ.

ವಿಡಿಯೋ ಇಲ್ಲಿದೆ ನೋಡಿ..

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ತ್ವರಿತವಾಗಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಈ ವೈರಲ್​ ಆದ ವಿಡಿಯೋಗೆ ಕೆಲವರು ಪೊಲೀಸ್​ ಕಾರ್ಯವನ್ನು ಶ್ಲಾಘಿಸಿದ್ದು. ಇನ್ನು ಕೆಲವರು ಟೀಕಿಸಿದ್ದಾರೆ.(ಏಜೆನ್ಸೀಸ್​)