ತಮಿಳುನಾಡು: ತಮಿಳು ಚಿತ್ರರಂಗದ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಪ್ಯಾನ್ ಇಂಡಿಯಾ 'ಲಿಯೋ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ವಿಜಯ್ ಫಿಲಂ ಇದೀಗ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂ. ಮೈಲಿಗಲ್ಲನ್ನು ತಲುಪಿದೆ.
ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟಿದ ರಜನಿಕಾಂತ್ ಅವರ 2.0 ( 783 ಕೋಟಿ ರೂ.) ಮತ್ತು ಜೈಲರ್ (604 ಕೋಟಿ ರೂ.) ನಂತರ ಲಿಯೋ ಮೂರನೇ ತಮಿಳು ಚಿತ್ರವಾಗಿ ಹೊರಹೊಮ್ಮಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಆಕ್ಷನ್ ಜಾನರ್ ಸಿನಿಮಾ 2023 ರಲ್ಲಿ ಜಾಗತಿಕ ಮೈಲಿಗಲ್ಲನ್ನು ತಲುಪಿದ ಐದನೇ ಭಾರತೀಯ ಚಲನಚಿತ್ರವಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' (1050 ಕೋಟಿ ರೂ), 'ಜವಾನ್' (1150 ಕೋಟಿ ರೂ.), ಸನ್ನಿ ಡಿಯೋಲ್ ನಟನೆಯ 'ಗದರ್ 2' (691 ಕೋಟಿ ರೂ.) ಮತ್ತು ರಜನಿಕಾಂತ್ ಅವರ 'ಜೈಲರ್' ಈ ವರ್ಷದ ಆರಂಭದಲ್ಲಿ ಮೈಲಿಗಲ್ಲು ಸಾಧಿಸಿದ ಇತರ ಚಲನಚಿತ್ರಗಳಾಗಿವೆ.
ಇಲ್ಲಿಯವರೆಗೂ ಭಾರತದಲ್ಲಿ 'ಲಿಯೋ' 285 ಕೋಟಿ ರೂ. ನಿವ್ವಳ ಗಳಿಸಿದ್ದು, ಈ ವಾರ ಭಾರತದ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ನಿವ್ವಳ ಮಾರ್ಕ್ ದಾಟುವ ನಿರೀಕ್ಷೆಯಿದೆ,(ಏಜೆನ್ಸೀಸ್).