Bengaluru: ನಿನ್ನೆ (ಜ.24) ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗವನ್ನು ಅಣ್ಣಮ್ಮ ಕೂರಿಸುವ ಸಲುವಾಗಿ ಯುವಕರು ಬಂದ್ ಮಾಡಿದ್ದನ್ನು ಪ್ರಶ್ನಿಸಿದ್ದ ಲಾಯರ್ ಜಗದೀಶ್ (Lawyer Jagadish), ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡರು. ತಾರಕಕ್ಕೇರಿದ ಮಾತಿನ ಜಟಾಪಟಿ ಹೊಡೆದಾಡುವ ಹಂತ ತಲುಪಿದ ಹಿನ್ನೆಲೆ ಸ್ಥಳೀಯರು ರೊಚ್ಚಿಗೆದ್ದು, ಜಗದೀಶ್ಗೆ ಹಿಗ್ಗಾಮುಗ್ಗಾ ಥಳಿಸಿದರು. ಈ ಪ್ರಕರಣದಲ್ಲಿ ಈಗ ಜಗದೀಶ್, ಅವರ ಪುತ್ರ ಮತ್ತು ಇಬ್ಬರು ಗನ್ಮ್ಯಾನ್ಗಳನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ‘ರೀಲ್’ ಸ್ನೇಹಕ್ಕೆ ಮಹಿಳೆ ಬಲಿ! ವಿಷ ಕುಡಿದ ಪಾಪಿ ಕಕ್ಕಿದ ಸತ್ಯ ಕೇಳಿ ಪೊಲೀಸರೇ ಶಾಕ್ | Reel Friendship
ಮೊನ್ನೆಯಷ್ಟೇ (ಜ.23) ಯುವಕರೊಂದಿಗೆ ಜಟಾಪಟಿ ಮಾಡಿಕೊಂಡಿದ್ದ ಜಗದೀಶ್, ನಿನ್ನೆ (ಜ.24) ಕೊಡಿಗೇಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗ ಮಧ್ಯೆ ಸ್ಥಳೀಯರೊಂದಿಗೆ ಮತ್ತೆ ಗಲಾಟೆ ಮಾಡಿಕೊಂಡರು. ಜಗದೀಶ್ ನಡೆಯಿಂದ ಕುಪಿತಗೊಂಡ ಸ್ಥಳೀಯ ಯುವಕರು ಅವರ ಸ್ಕಾರ್ಪಿಯೋ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಕಾರನ್ನು ಹೊಡೆದು ಚಿಂದಿ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದ ಜಗದೀಶ್ ಗನ್ಮ್ಯಾನ್ ತಕ್ಷಣವೇ ತಮ್ಮ ಬಳಿಯಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಶಬ್ದಕ್ಕೆ ಯುವಕರ ಗುಂಪು ಚದುರಿತು. ಗುಂಡಿನ ಸದ್ದು ಕೇಳಿದ್ದೇ ತಡ ಜಗದೀಶ್ ಮೇಲೆ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ತನ್ನ ಮುಖಕ್ಕೆ ಗುದ್ದಿ, ರಕ್ತ ಬರುವಂತೆ ಥಳಿಸಿದ ಕೆಲವರ ವಿರುದ್ಧ ಜಗದೀಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಇದಕ್ಕೆ ಸ್ಥಳೀಯರು ಪ್ರತಿ ದೂರು ನೀಡಿದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಲಾಯರ್ ಜಗದೀಶ್, ಅವರ ಪುತ್ರ ಮತ್ತು ಗನ್ಮ್ಯಾನ್ರನ್ನು ಬಂಧಿಸಿದ್ದು, ಕೋರ್ಟ್ಗೆ ಹಾಜರುಪಡಿಸಲಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸವನ್ನು ಸಂಪರ್ಕಿಸುವ ಮಾರ್ಗವೊಂದರಲ್ಲಿ ಸ್ಥಳೀಯ ಯುವಕರು ಅಣ್ಣಮ್ಮ ಕೂರಿಸುವ ಸಲುವಾಗಿ ರಸ್ತೆಯನ್ನು ಬಂದ್ ಮಾಡಿದ್ದರು. ಇದೇ ವಿಚಾರಕ್ಕೆ ಜಗದೀಶ್ ಮತ್ತು ಅಲ್ಲಿನ ಯುವಕರ ಮಧ್ಯೆ ಗುದ್ದಾಟ ನಡೆದಿತ್ತು (ಜ.23). ಇದರ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿತ್ತು. ನಿನ್ನೆ (ಜ.24) ರಾತ್ರಿ ಸುಮಾರು 9 ಗಂಟೆಗೆ ಅದೇ ಮಾರ್ಗದಲ್ಲಿ ತನ್ನ ಕಾರಿನಲ್ಲಿ ಬಂದ ಜಗದೀಶ್, ರಸ್ತೆ ಬಂದ್ ಮಾಡಿದ್ದಕ್ಕಾಗಿ ಯುವಕರನ್ನು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದು, ಜಗದೀಶ್ ಕಾರನ್ನು ಪುಡಿಗಟ್ಟಿ, ಅವರ ಮೇಲೆ ಗಂಭೀರವಾಗಿ ಹಲ್ಲೆಗೈದಿದ್ದಾರೆ.