ನವದೆಹಲಿ: ಟಾಪ್ ಪೋರ್ನ್ ಸ್ಟಾರ್ ಪಟ್ಟಿಯಲ್ಲಿರುವ ಲಾನಾ ರೋಡ್ಸ್ 19 ವರ್ಷ ವಯಸ್ಸಿಗೆ ತಾನು ಈ ಕರಾಳ ಲೋಕಕ್ಕೆ ಹೇಗೆ ಎಂಟ್ರಿಯಾದೆ? ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾಳೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಮನೆಯಲ್ಲಿ ಕಷ್ಟವಿತ್ತು. ಹಣ ಸಂಪಾದನೆ ಮಾಡಬೇಕಿತ್ತು. ಏಜೆಂಟ್ ಒಬ್ಬ ನನ್ನನ್ನು ಪೋರ್ನ್ ಲೋಕಕ್ಕೆ ಕರೆದುಕೊಂಡ ಹೋದ. ಪ್ರತಿ ದಿನವೂ 40 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯ ಜತೆ ಮಲಗಬೇಕಿತ್ತು. ಹೇಳಿಕೊಳ್ಳಲಾಗದ ನೋವು ಅನುಭವಿಸಿದ್ದೇನೆ. ನನಗೆ ಏನಾಗುತ್ತಿದೆ ಎಂದೇ ತಿಳಿದಿರಲಿಲ್ಲ. ವಿಡಿಯೋ ಮಾಡುತ್ತಿದ್ದ ಅರಿವೂ ನನಗೆ ಇರಲಿಲ್ಲ ಎಂದಿದ್ದಾರೆ.
ಅದೊಂದು ದಿನ ಆ ವಿಡಿಯೋ ನೋಡಿದಾಗ ಅದರಲ್ಲಿ ಇದ್ದದ್ದು ನಾನೇ ಎಂದು ನೋಡಿದಾಗ ನಾನು ಏನು ಮಾಡುತ್ತಿದ್ದೇನೆ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋದರು ಎನ್ನುವ ಅರಿವಾಯ್ತು. ಅದಾಗಲೇ ನನ್ನ ವಿಡಿಯೋಗಳು ಟಾಪ್ ಲೆವೆಲ್ನಲ್ಲಿ ಓಡುತ್ತಿತ್ತು. ಈ ವೃತ್ತಿಗೆ ಹೋಗಿ ಎಂಟೇ ತಿಂಗಳಿನಲ್ಲಿ ನನಗೆ ನಾನು ಎಲ್ಲಿದ್ದೇನೆ ಎನ್ನುವ ಅರಿವಾಗಿ ಅದನ್ನು ಬಿಟ್ಟುಬಂದೆ. ಆದರೆ ಅದ್ಯಾವ ವಿಡಿಯೋ ಕೂಡಾ ಟಿಲೀಟ್ ಆಗಿಲ್ಲ ಎಂದಿದ್ದಾರೆ.
ಪೋರ್ನ್ ಸ್ಟಾರ್ನಿಂದ ಹೊರ ಬಂದ ಮೇಲೆ ಹಲವಾರು ಯುಟ್ಯೂಬರ್, ಇನ್ಸ್ಟಾಗ್ರಾಮರ್ ಸೇರಿದಂತೆ ಪ್ರಭಾವಿಗಳನ್ನು ಭೇಟಿಯಾದೆ. ಪೋರ್ನ್ ವಿಡಿಯೋ ಮಾಡಿ ಬರುವ ಹಣಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿಗೆ ಹಣ ಅವರು ಕೇವಲ ಪೋಸ್ಟ್ ಹಾಕುವ ಮೂಲಕ ಗಳಿಸುತ್ತಾರೆ ಎಂದು ತಿಳಿಯಿತು ಎಂದಿದ್ದಾರೆ.
ನನ್ನಂತೆಯೇ ಸರಿಯಾದ ಮಾರ್ಗದರ್ಶನವಿಲ್ಲದೇ ಅದೆಷ್ಟೋ ಹುಡುಗಿಯರು ಪೋರ್ನ್ ಲೋಕಕ್ಕೆ ಹೋಗುತ್ತಿದ್ದಾರೆ. ಈ ವೃತ್ತಿಯಿಂದ ತುಂಬಾ ಹಿಂಸೆ ಅನುಭವಿಸಿದ್ದೇನೆ. ಜೀವನದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ದಿಢೀರ್ ದುಡ್ಡು ಮಾಡುವ ಹಂಬದಲ್ಲಿ ತಾವೆಂಥ ಲೋಕಕ್ಕೆ ಹೋಗುತ್ತಿದ್ದೇವೆ ಎನ್ನುವ ಅರಿವಿಲ್ಲದ ಅದೆಷ್ಟೋ ಮಂದಿಯಲ್ಲಿ ನಾನೂ ಒಬ್ಬಳಾಗಿ ಹೋದೆ. ನನ್ನ ವಿಡಿಯೋಗಳು ಡಿಲೀಟ್ ಆಗಿಲ್ಲ. ಅವುಗಳನ್ನು ನೋಡಿದಾಗಲೆಲ್ಲಾ ನನಗೆ ನೋವಾಗುತ್ತದೆ ಎಂದಿದ್ದಾರೆ.
ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಅರ್ಥವೇ ಆಗುವುದಿಲ್ಲ. ಆದರೆ ಒಮ್ಮೆ ಪೋರ್ನ್ ಲೋಕಕ್ಕೆ ಹೋಗಿಬಿಟ್ಟರೆ ಈ ಮಾತನ್ನು ಹೇಳಿದರೂ ಯಾರೂ ನಂಬುವುದಿಲ್ಲ. ಪುರುಷರಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಅವರಿಗೆ ಬೇಕಿರುವುದು ತೃಪ್ತಿ ಅಷ್ಟೇ. ಆದರೆ ಕೊನೆಗೆ ಬಲಿಯಾಗುವುದು ಹುಡುಗಿಯರು ಮಾತ್ರ ಎನ್ನುತ್ತಾರೆ.