ನ್ಯೂಸ್

ಬೆಂಗಳೂರಿನತ್ತ ಲಾಲು ಪ್ರಸಾದ್​ ಯಾದವ್ ಪಯಣ​​; ಫಿಕ್ಸ್​ ಆಯ್ತು ದಿನಾಂಕ!

ಬೆಂಗಳೂರು: ವಿರೋಧ ಪಕ್ಷದ ಸಭೆಗಾಗಿ ಬೆಂಗಳೂರಿಗೆ ಆಗಮಿಸಲು ಆರ್‌ಜೆಡಿ ಮುಖ್ಯಸ್ಥ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್ ಸಜ್ಜಾಗಿದ್ದು, ಇದೀಗ ದಿನಾಂಕ ಕೂಡ ನಿಗದಿಯಾಗಿದೆ.

ಲಾಲು ಪ್ರಸಾದ್ ಯಾದವ್ ಇದೇ ಜುಲೈ 17-18 ರಂದು ವಿರೋಧ ಪಕ್ಷಗಳ ಬೃಹತ್ ಸಮಾವೇಶಕ್ಕಾಗಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಈ ಬಗ್ಗೆ ದೆಹಲಿಗೆ ತೆರಳುವ ಮುನ್ನ ಪಾಟ್ನಾ ಏರ್​​ಪೋರ್ಟ್​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು ಪ್ರಸಾದ್​, "2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಿಂದ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲು ವೇದಿಕೆ ಸಿದ್ಧಪಡಿಸಲು ಬೆಂಗಳೂರಿಗೆ ತೆರಳಲಿದ್ದೇವೆ" ಎಂದು ಹೇಳಿದರು.

"ನನಗೆ ರಕ್ತ ಪರೀಕ್ಷೆ ಸೇರಿದಂತೆ, ನಿತ್ಯದ ವೈದ್ಯಕೀಯ ಪರೀಕ್ಷೆಗಾಗಿ ಸದ್ಯ ದೆಹಲಿಗೆ ಹೋಗುತ್ತಿದ್ದೇನೆ. ತದನಂತರ ನಾನು ಮತ್ತೆ ಪಾಟ್ನಾಗೆ ಬರುತ್ತೇನೆ, ನಂತರ ವಿರೋಧ ಪಕ್ಷಗಳ ಸಭೆಗಾಗಿ ಬೆಂಗಳೂರಿಗೆ ಹೋಗುತ್ತೇನೆ" ಎಂದು ಹೇಳಿದರು,(ಏಜೆನ್ಸೀಸ್).