ಟೋಕಿಯೋ: ಸಂಕಷ್ಟದಲ್ಲೂ ವ್ಯಾಪಾರ ಮಾಡುವುದಕ್ಕೆ ಕ್ರಿಯೇಟಿವಿಟಿ ಬೇಕೇ ಬೇಕು. ಅದಕ್ಕೆ ಇದೊಂದು ಉದಾಹರಣೆ. ಜಪಾನ್ನ ಈ ಫೇಸ್ ಮಾಸ್ಕ್ ಬಿಡುಗಡೆಯಾದ ಕೆಲವೇ ಕೆಲವು ನಿಮಿಷಗಳಲ್ಲಿ ಖಾಲಿಯಾಗಿವೆಯಂತೆ. ಇದಕ್ಕೆ ಸಂಬಂಧಿಸಿದ ಟ್ವಿಟರ್ ಖಾತೆಯಲ್ಲಿ ಅಮೆರಿಕದಿಂದಲೂ ಬೇಡಿಕೆ ವ್ಯಕ್ತವಾಗಿರುವುದು ಕಂಡುಬಂದಿದೆ.
ಲೇಸ್ ಬ್ರಾ ಫೇಸ್ ಮಾಸ್ಕ್ನ ಚಿಂತನೆ ರೂಪುಗೊಂಡಾಗ ಅಲ್ಲಿನ ಗ್ರಾಹಕರು ಹೇಗೆ ಸ್ವೀಕರಿಸುವರೆಂಬ ಭಯ ಕಂಪನಿಗೆ ಇತ್ತಂತೆ. ಹೀಗಾಗಿ ಟೆಲಿವಿಷನ್ ಸೆಲೆಬ್ರಿಟಿ ಅಯಾ ಕೊಂಡೊ ಪ್ರೊಟೊ ಟೈಪ್ ಫೇಸ್ ಮಾಸ್ಕ್ ಧರಿಸಿರುವ ಫೋಟೊವನ್ನು ಕಂಪನಿ ಆನ್ಲೈನ್ನಲ್ಲಿ ಶೇರ್ ಮಾಡಿಕೊಂಡಿತ್ತು. ಗ್ರಾಹಕರ ಪ್ರತಿಕ್ರಿಯೆ ನೋಡಿ ಬೆಚ್ಚಿ ಬೀಳುವ ಸರದಿ ಕಂಪನಿಯದ್ದಾಗಿತ್ತು.
ಕಳೆದ ಶನಿವಾರ ಅಟ್ಸುಮಿ ಫ್ಯಾಷನ್ ಲೇಸ್ ಬ್ರಾ ಫೇಸ್ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇದಕ್ಕೆ ಮಿಡ್ ರೇಂಜ್ ಜಪಾನೀಸ್ ಬ್ರಾದ ದರದ ಶೇಕಡ 50 ಕಡಿಮೆ ದರ. ಆದಾಗ್ಯೂ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ 1,100 ರೂಪಾಯಿ. ಆರಂಭಿಕ ಹಂತವಾದ ಕಾರಣ ಕಂಪನಿಗೆ ಬೇಡಿಕೆಯನ್ನು ಒಮ್ಮೆಲೇ ಪೂರೈಸಲಾಗಲಿಲ್ಲ. ಬಿಳಿ, ಪಿಂಕ್, ಲೈಮ್, ಅಕ್ವಾ ಬ್ಲೂ, ಕಪ್ಪು ಬಣ್ಣಗಳ ತಲಾ 50 ಫೇಸ್ ಮಾಸ್ಕ್ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಅದು ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿ ಬಿಟ್ಟವು. ಈಗ ಫೇಸ್ ಮಾಸ್ಕ್ ಸಿದ್ಧಪಡಿಸುವ ಪ್ರಮಾಣವನ್ನು ಕಂಪನಿ ಹೆಚ್ಚಿಸಿದ್ದು, ಗ್ರಾಹಕರ ಬೇಡಿಕೆ ಈಡೇರಿಸಲು ಮುಂದಾಗಿದೆ. (ಏಜೆನ್ಸೀಸ್)