ನ್ಯೂಸ್

ಅತಿ ಚಿಕ್ಕ ವಯಸ್ಸಿಗೆ ದುರಂತ: ಬಾಲಿವುಡ್ ಖ್ಯಾತ ನಿರ್ಮಾಪಕನ ಮಗಳು ಕ್ಯಾನ್ಸರ್​ಗೆ ಬಲಿ

ಮುಂಬೈ: ಬಾಲಿವುಡ್‌ನ ನಿರ್ಮಾಪಕ, ನಟ ಕೃಷ್ಣ ಕುಮಾರ್ ಪುತ್ರಿ ತಿಶಾ ಕುಮಾರ್ ತಮ್ಮ 20ನೇ ವಯಸ್ಸಿಗೆ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಿಶಾ ಜು.18ರಂದು ವಿಧವಶರಾಗಿದ್ದಾರೆ ಎಂದು ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ.

ಅತಿ ಚಿಕ್ಕ ವಯಸ್ಸಿನಲ್ಲೇ ತಿಶಾ ಕ್ಯಾನ್ಸರ್‌ಗೆ ಬಲಿಯಾಗಿರುವುದು ಬಾಲಿವುಡ್ ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿದೆ. ‘ಅನಿಮಲ್’, ‘ಭೂಲ್ ಭುಲಯ್ಯ 2’ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಕೃಷ್ಣ ಕುಮಾರ್​ ಅವರ ಏಕೈಕ ಪುತ್ರಿ ತಿಶಾ. ಹೆಮ್ಮಾರಿ ಕ್ಯಾನ್ಸರ್​ಗೆ ಬಲಿಯಾದ ತಿಶಾ 2003ರ ಸೆಪ್ಟೆಂಬರ್ 6ರಂದು ಕೃಷ್ಣ ಕುಮಾರ್​​ ಹಾಗೂ ತಾನ್ಯಾ ಸಿಂಗ್ ಮಗಳಾಗಿ ಜನಿಸಿದರು.

ಕ್ಯಾನ್ಸರ್‌ನಿಂದ ಬಳುತ್ತಿದ್ದ ತಿಶಾ ಕುಮಾರ್​ಗೆ ಕುಟುಂಬಸ್ಥರು ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಗುರುವಾರದಂದು (ಜು.18) ಚಿಕಿತ್ಸೆ ಫಲಕಾರಿಯಾಗದೇ ತಿಶಾ ನಿಧನರಾಗಿದ್ದಾರೆ. ಈಗ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಪುತ್ರಿಯ ನಿಧನ ಕೃಷ್ಣ ಕುಮಾರ್ ದಂಪತಿಗೆ ಆಪ್ತರಿಗೆ ಆಘಾತವುಂಟು ಮಾಡಿದೆ.