ಮುಂಬೈ: ವಿಶ್ವದ ಗಣ್ಯರು ಈ ಶತಮಾನದ ಅಭೂತಪೂರ್ವ ವಿವಾಹ ಸಂಭ್ರಮವೊಂದಕ್ಕೆ ಸಾಕ್ಷಿಯಾಗಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಶುಭಘಳಿಗೆಗೆ ಕೋಟ್ಯಾಂತರ ಕಂಗಳು ಸಾಕ್ಷಿಯಾಗಿವೆ. ಈ ಕಾರ್ಯಕ್ರಮದ ಸಂಭ್ರಮಾಚರಣೆ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು: ಡಿಕೆ ಶಿವಕುಮಾರ್
ಹೌದು…ಹೀಗೆ ಹೇಳುವುದಕ್ಕೆ ಕಾರಣ ಏನೆಂದರೆ, ವಿವಾಹ ಮಹೋತ್ಸವ ನಡೆದದ್ದು ಜುಲೈ 12ರಂದು. ಅದಾಗಿ ಆರನೇ ದಿನವೂ ಸಂಭ್ರಮ ಮುಂದುವರಿಯುತ್ತಾ ಇದೆ. ಈ ಸಲ ತಮ್ಮ ಸಿಬ್ಬಂದಿ ಜತೆಗೆ ಸಂಭ್ರಮಿಸಿದೆ ಅಂಬಾನಿ ಕುಟುಂಬ. ವಿಶೇಷ ಏನೆಂದರೆ, ಮನೆಗೆಲಸ ಮಾಡುವವರು ಹಾಗೂ ಅವರ ಕುಟುಂಬದ ಸದಸ್ಯರು ಸಹ ಈ ವಿಶೇಷ ಆರತಕ್ಷತೆಯಲ್ಲಿ ಭಾಗೀ ಆಗಿದ್ದರು. ಅಂದ ಹಾಗೆ ಅಂಬಾನಿ ಕುಟುಂಬದ ಮದುವೆಯ ಸಂಭ್ರಮದ ಅಂತಿಮ ಸುತ್ತು ಇದು ಎಂಬುದು ಮತ್ತೂ ವಿಶೇಷವಾಗಿದೆ.
ಸಾಮಾನ್ಯವಾಗಿ ಏನಾಗುತ್ತದೆ ಅಂದರೆ, ಸಿಬ್ಬಂದಿ ಹಾಗೂ ಮನೆಗೆಲಸದವರು ಸಮಾರಂಭಗಳ ಸಿದ್ಧತೆಯಲ್ಲಿ ಹಾಗೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿಯೇ ಬಿಡುವಿಲ್ಲದಷ್ಟು ಕೆಲಸ ಮೈ ಮೇಲೆ ಎಳೆದುಕೊಂಡಿರುತ್ತಾರೆ. ಮದುವೆಯ ಶುಭಘಳಿಗೆಗೆ ಕೋಟ್ಯಾಂತರ ಕಂಗಳು ಸಾಕ್ಷಿಯಾಗಿವೆ. ಆದರೆ ಈ ಕಾರ್ಯಕ್ರಮದ ವಿಶೇಷವೇ ಸಿಬ್ಬಂದಿಯೇ ಗೌರವ ಅತಿಥಿಗಳಾಗಿ ಸತ್ಕಾರ ಸ್ವೀಕರಿಸಿದ್ದಾರೆ. ಅಂಬಾನಿ ಮತ್ತು ಮರ್ಚೆಂಟ್ ಕುಟುಂಬ ತುಂಬ ಗೌರವಯುತವಾಗಿ- ಪ್ರೀತಿಯಿಂದ ಅವರನ್ನು ಸತ್ಕರಿಸಿದೆ.
ಸಿಬ್ಬಂದಿ ಹಾಗೂ ಮನೆಗೆಲಸದಲ್ಲಿ ತೊಡಗಿಕೊಂಡವರನ್ನು ಸತ್ಕರಿಸುವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸೋನು ನಿಗಮ್, ಹರಿಹರನ್, ಉದಿತ್ ನಾರಾಯಣ್, ಸುಖವಿಂದರ್, ಮೋಹಿತ್ ಚೌಹಾಣ್, ಶ್ರೇಯಾ ಘೋಷಾಲ್, ನೀತಿ ಮೋಹನ್ ಮತ್ತು ಜೋನಿತಾ ಗಾಂಧಿ ಇಂಥವರು ಹಾಡುಗಳನ್ನು ಹಾಡಿದರು. ಎ.ಆರ್. ರೆಹಮಾನ್ ನೇತೃತ್ವದಲ್ಲಿ ಸಮ್ಮೋಹನಗೊಳಿಸುವ ಸಂಗೀತ ಕಛೇರಿಯನ್ನು ಅತಿಥಿಗಳಿಗೆ ನೀಡಲಾಯಿತು, ಇದನ್ನು ಕುಟುಂಬ ಮತ್ತು ಅತಿಥಿಗಳು ಒಟ್ಟಿಗೆ ಆನಂದಿಸಿದರು. ದಶಾವತಾರ ಪ್ರದರ್ಶನ, ಬನಾರಸ್ ಅನುಭವ ಮತ್ತು ಬಹು-ತಿನಿಸುಗಳ ಆಹಾರ ಸೇರಿದಂತೆ ಅನೇಕ ಇತರ ಅನುಭವಗಳೊಂದಿಗೆ ನೆನಪಿಟ್ಟುಕೊಳ್ಳುವಂಥ ಸಂಜೆಯು ಕಳೆಯಿತು.
ಅತಿಥಿಗಳು ಇಂಥ ಅದ್ಭುತವಾದ ಅನುಭವಗಳನ್ನು ಮತ್ತು ಅಲಂಕಾರವನ್ನು ಸಂಪೂರ್ಣವಾಗಿ ಆನಂದಿಸಿದರು ಹಾಗೂ ಅಂಬಾನಿ ಕುಟುಂಬದ ಈ ರೀತಿಯ ಆತಿಥ್ಯದ ವೈಖರಿಯನ್ನು ಮನಸಾರೆ ಶ್ಲಾಘಿಸಿದರು.
ಬಾಲಿವುಡ್ ನಟಿ ಜಾನ್ವಿ ಕಪೂರ್ ದಿಢೀರ್ ಆಸ್ಪತ್ರೆಗೆ ದಾಖಲು! ಶ್ರೀದೇವಿ ಮಗಳ ಆರೋಗ್ಯಕ್ಕೆ ಏನಾಯ್ತು?