Kiss Cam: ಕೋಲ್ಡ್ ಪ್ಲೇ ಸಂಗೀತ ಕಚೇರಿಯಲ್ಲಿ ಅಸ್ತ್ರೋನೋಮರ್ ಕಂಪನಿ ಸಿಇಒ ಆಂಡಿ ಬೈರನ್ ಹಾಗು ಸಹೋದ್ಯೋಗಿ ಭಾಗಿಯಾಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರೀ ವಿವಾದ ಮತ್ತು ಟೀಕೆ ಗುರಿಯಾಗಿದೆ. ಈ ಹಿನ್ನೆಲೆ ಸದ್ಯಕ್ಕೆ ಆಂಡಿ ಬೈರನ್ ಅವರನ್ನು ರಜೆ ಮೇಲೆ ಕಳುಹಿಸಿಕೊಡಲಾಗಿದ್ದು, ಮಧ್ಯಂತರ ಸಿಇಒ ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಂಪನಿ,“ಆಂಡಿ ಬೈರನ್ ಅವರನ್ನು ರಜೆಯ ಮೇಲೆ ಇರಿಸಲಾಗಿರುವುದರಿಂದ ಸಹ-ಸಂಸ್ಥಾಪಕ ಮತ್ತು ಮುಖ್ಯ ಅಧಿಕಾರಿ ಪೀಟ್ ಡಿಜಾಯ್ ಪ್ರಸ್ತುತ ಮಧ್ಯಂತರ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತವಾಗಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ" ಎಂದು ಹೇಳಿದೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ? ಫಾಕ್ಸ್ ಬರೋದ ಜಿಲೆಟ್ ಕ್ರೀಡಾಂಗಣದಲ್ಲಿ ಕೋಲ್ಡ್‌ಪ್ಲೇ ಪ್ರದರ್ಶನದ ವೇಳೆ ಅಸ್ಟ್ರೋನೋಮರ್ ಸಿಇಒ ಆಂಡಿ ಬೈರನ್ ಕ್ರಿಸ್ಟಿನ್ ಕ್ಯಾಬಟ್ ಜತೆಗೆ ಆತ್ಮೀಯ ಕ್ಷಣವನ್ನು ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ. ಕಾರ್ಯಕ್ರಮದ ವೇಳೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದ ಅವರಿಬ್ಬರ ಅರಿವಿಗೆ ಬರಲಿಲ್ಲ. ಆದರೆ, ರೆಕಾರ್ಡ್ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ಮುಖ ಮರೆಮಾಚಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಅವರ ಆಪ್ತ ಕ್ಷಣಗಳು ರೆಕಾರ್ಡ್ ಆಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.(ಏಜೆನ್ಸೀಸ್)