ಮಕ್ಕಳೊಂದಿಗೆ ಕುಳಿತು ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನೋಡುವಾಗ ಎಲ್ಲರೂ ಮೈಮರೆಯುವುದು ಸಾಮಾನ್ಯವಾಗಿದೆ. ಅಷ್ಟು ಅದ್ಭುತವಾಗಿ ದೃಶ್ಯಗಳನ್ನು ಸೆರೆಹಿಡಿಯಲಾಗಿರುತ್ತದೆ. ಸದ್ಯ ಉತ್ತಮ ಗುಣಮಟ್ಟದ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಪಕ್ಷಿಯೊಂದ ನೀರಿನೊಳಗೆ ತನ್ನ ಆಹಾರವನ್ನು ಕಂಡೊಡನೆ ಹೇಗೆ ಬೇಟೆಯಾಡುತ್ತದೆ ಎಂಬುದನ್ನು ತೋರಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಮರದ ಕೊಂಬೆಯ ಮೇಲೆ ಕುಳಿತಿರುವ ಕಿಂಗ್ಫಿಶರ್ ಬೇಟೆಯನ್ನು ಹುಡುಕುತ್ತಿರುತ್ತದೆ. ನೀರಿನೊಳಗೆ ತನ್ನ ಆಹಾರವನ್ನು ಕಂಡೊಡನೆ ಕಿಂಗ್ಫಿಶರ್ ನೀರಿಗೆ ಜಿಗಿಯುತ್ತದೆ. ಡೈವಿಂಗ್ ಮಾಡುವಾಗ ಬೇಟೆಯನ್ನು ಬಾಯಿಯಲ್ಲಿ ಸೆರೆಹಿಡಿಯುತ್ತದೆ. ಈ ಅಮೋಘ ದೃಶ್ಯವನ್ನು ಸ್ಲೋಮೋಷನ್ನಲ್ಲಿ ಸೆರೆಹಿಡಿಯಲಾಗಿದೆ. ದೃಶ್ಯದಲ್ಲಿ ಪಿನ್ ಟು ಪಿನ್ ಕ್ಲಾರಿಟಿಯನ್ನು ಕಾಣಬಹುದಾಗಿದೆ. ಬೇಟೆಯಾಡಿದ ತಕ್ಷಣವೇ ಸಮಯ ವ್ಯರ್ಥ ಮಾಡದೆ ಮೇಲಕ್ಕೆ ಬರುತ್ತದೆ. ಈ ಅದ್ಭುತ ದೃಶ್ಯವು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
31 ಸೆಕೆಂಡ್ ಇರುವ ಈ ಕ್ಲಿಪ್ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದ್ಭುತ. ಅದರ ಕಣ್ಣುಗಳು ನೀರಿನೊಳಗೆ ಮುಚ್ಚಿಹೋಗಿದೆ ಎನ್ನಿಸುತ್ತಿದೆ, ಯಾರಾದರೂಳು ಇದನ್ನು ಖಚಿತಪಡಿಸಿ. ಕ್ಯಾಮೆರಾವರ್ಕ್ ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರತಿ ಸೆಕೆಂಡಿಗೆ 600 ಫ್ರೇಮ್‌ಗಳಿಗಿಂತ ಹೆಚ್ಚಿನ ವೇಗದಲ್ಲಿ ದೃಶ್ಯಗಳನ್ನು ನೋಡಿದಾಗ, ನೀರಿನೊಳಗಿನ ಅದರ ಚಿಕ್ಕ ಉಗುರುಗಳಂತಹ ಪ್ರತಿ ವಿಷಯವನ್ನು ಸಂಕ್ಷಿಪ್ತವಾಗಿ ನೋಡಬಹುದು ಎಂದು ಈ ವಿಡಿಯೋದಿಂದ ತಿಳಿಯುತ್ತದೆ. ವೈರಲ್ ಆದ ಬಳಿಕ ಈ ವಿಡಿಯೋವನ್ನು 23 ಲಕ್ಷದ ಮೂವತ್ತೈದು ಸಾವಿರಕ್ಕೂ ಹೆಚ್ಚ ಮಂದಿ ವೀಕ್ಷಿಸಿದ್ದಾರೆ. 1 ಲಕ್ಷ ಅರವತ್ತ್ಮೂರು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.