Kingdom Movie: ಇಂದು (ಜು.31) ತೆರೆಗೆ ಅಪ್ಪಳಿಸಿರುವ ನಟ ವಿಜಯ್ ದೇವರಕೊಂಡ ಅಭಿನಯದ 'ಕಿಂಗ್ಡಮ್' ಚಿತ್ರಕ್ಕೆ ಉತ್ತಮ ಓಪನಿಂಗ್ ದೊರಕಿದ್ದು, ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿವೆ.
ಇದನ್ನೂ ಓದಿ: ಎಷ್ಟೇ ಒತ್ತಡ ಬಂದರೂ ಅಧ್ಯಯನ ಕೈಬಿಡಬೇಡಿ; ಹಾವೇರಿ ವಿವಿ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಜಿಪಂ ಸಿಇಒ ರುಚಿ ಬಿಂದಲ್ ಸಲಹೆ
ಒಂದಷ್ಟು ಮಂದಿಗೆ ಚಿತ್ರ ಹಿಡಿಸಿದರೆ, ಇನ್ನೊಂದಷ್ಟು ಜನಕ್ಕೆ ಸಿನಿಮಾ ಸಾಧಾರಣ ಎನಿಸಿದೆ. ಈ ಮಧ್ಯೆ ಹೈದರಾಬಾದ್‌ನಲ್ಲಿ 'ಕಿಂಗ್ಡಮ್' ಕುರಿತು ಮಾತನಾಡಿದ ನಿರ್ಮಾಪಕ ನಾಗ ವಂಶಿ, "ಫಸ್ಟ್ ಆಫ್ ಓಕೆ. ಸೆಕೆಂಡ್ ಆಫ್ ಸ್ಲೋ ಎಂದು ಹಲವರು ಹೇಳ್ತಾರೆ. ಹಾಗಂತ, ಅದೇ ಅಂತಿಮ ಎಂದು ನಿರ್ಧರಿಸಬೇಡಿ. ನಿಮಗೆ ಚಿತ್ರ ಇಷ್ಟವಾಗದಿದ್ದರೆ, ನೇರವಾಗಿ ನನಗೆ ಕಾಲ್ ಮಾಡಿ, ಬೈಗುಳ ನೀಡಿ" ಎಂದಿದ್ದಾರೆ.
"ಇಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದು ಪ್ರತಿಯೊಂದು ಚಿತ್ರಕ್ಕೂ ತೀರ ಸಾಮಾನ್ಯ. ನಮ್ಮ ಚಿತ್ರ ತುಂಬಾ ಚೆನ್ನಾಗಿದೆ ಹಾಗೂ ನಿಮಗೆಲ್ಲರಿಗೂ ಇಷ್ಟವಾಗುತ್ತದೆ. ಕಿಂಗ್ಡಮ್ ನೋಡಿ, ಇಷ್ಟವಾಗದಿದ್ರೆ ನನಗೇ ಕರೆ ಮಾಡಿ ಹೇಳಿ. ನಾನಿದನ್ನು ತುಂಬಾ ಆತ್ಮವಿಶ್ವಾಸದಿಂದ ಹೇಳ್ತಿದ್ದೀನಿ. ಚಿತ್ರದ ತಾಂತ್ರಿಕ ಅಂಶಗಳು ಹಾಲಿವುಡ್ ಮಾನದಂಡಗಳಿಗೆ ಅನುಗುಣವಾಗಿವೆ" ಎಂದು ನಾಗವಂಶಿ ಭರವಸೆಯ ಮಾತುಗಳನ್ನಾಡಿದ್ದಾರೆ.
ಗೌತಮ್ ತಿನ್ನೂರಿ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ಭಾಗ್ಯಶ್ರೀ ಬೋರ್ಸೆ, ಸತ್ಯದೇವ ಕಾಂಚರಣ, ಕೌಶಿಕ್ ಮಹತಾ, ಬಿಎಸ್. ಅವಿನಾಶ್, ಕೇಶವ್ ದೀಪಕ್ ಸೇರಿದಂತೆ ಮುಂತಾದವರ ತಾರಾಗಣವಿದೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸುವ ಚಿತ್ರವು ಮುಂದಿನ ದಿನಗಳಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).