ನ್ಯೂಸ್

VIDEO | ಎದ್ದುನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಕಾಳಿಂಗ ಸರ್ಪ!

ನವದೆಹಲಿ: ಕಾಡಿನ ಲೋಕದಲ್ಲಿ ಪ್ರಕೃತಿ ಯಾವಾಗಲೂ ಸರ್ಪ್ರೈಸ್​ ನೀಡುತ್ತಲೇ ಇರುತ್ತದೆ. ಇಲ್ಲಿ ಕಾಳಿಂಗ ಸರ್ಪ ವೊಂದು ಎದ್ದು ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ.

ಕಾಳಿಂಗ ಸರ್ಪ ಅಷ್ಟೊಂದು ಎತ್ತರಕ್ಕೆ ಎದ್ದು ನಿಲ್ಲುತ್ತಾ ಎಂದು ಅನೇಕರಲ್ಲಿ ಪ್ರಶ್ನೆ ಮೂಡಿರಬಹುದು. ಹೌದು. ಕಾಳಿಂಗ ಸರ್ಪ ತನ್ನ ದೇಹದ ಮೂರನೇ ಒಂದರಷ್ಟು ಭಾಗವನ್ನು ಎತ್ತಿ ಹಿಡಿಯಬಲ್ಲದು.

ಹಾಗೆ ತನ್ನ ಶರೀರವನ್ನು ಕಾಳಿಂಗ ಸರ್ಪವೊಂದು ಎತ್ತಿ ಹಿಡಿದ ವಿಡಿಯೋವನ್ನು ಸುಶಾಂತ್​ ನಂದಾ ಎನ್ನುವ ಫಾರೆಸ್ಟ್​ ಸರ್ವೀಸ್​ನಲ್ಲಿರುವ ಅಧಿಕಾರಿಯೊಬ್ಬರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಟ್ವಿಟರ್​ ಬಳಕೆದಾರರೂ ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಒಬ್ಬರು ಹಾವಿನ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಇನ್ನೊಬ್ಬರು ಹೀಗೆ ಹಾವು ತಲೆಯೆತ್ತಿ ನಿಲ್ಲುವುದರ ಹಿಂದೆ ಯಾವೆಲ್ಲಾ ಅಂಗಗಳು ಅದಕ್ಕೆ ಸಹಾಯ ಮಾಡುತ್ತಿವೆ ಎನ್ನುವುದನ್ನು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು ಈ ಘಟನೆಯನ್ನು ವಾಸ್ತವದಿಂದ ದೂರವಿದೆ ಎಂದಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ.