Child kidnapping : ಮುಂಬೈನ ಕೆಇಎಂ ಆಸ್ಪತ್ರೆಯಿಂದ ಅಪಹರಿಸಲ್ಪಟ್ಟಿದ್ದ 2 ವರ್ಷದ ಬಾಲಕನನ್ನು ಥಾಣೆ ರೈಲ್ವೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಕುಟುಂಬಸ್ಥರಿಗೆ ಹಿಂದಿರುಗಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಅಮೋಲ್ ಉದಲೇಕರ್ (42) ಎಂದು ತಿಳಿದುಬಂದಿದೆ. ಈತ ಆಸ್ಪತ್ರೆಯ ಹೊರಗೆ ಮಗುವಿನ ಕುಟುಂಬದೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು, ನಂತರ ಸುತ್ತಾಡುವ ನೆಪದಲ್ಲಿ ಬಾಲಕನನ್ನು ಅಪರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಅಂಗಳಕ್ಕೆ ಜಾತಿ ಗಣತಿ ಸಮೀಕ್ಷೆ ಗೊಂದಲ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಜತೆ ಚರ್ಚೆ! Caste Census
ಮಗುವಿನ ಪಾಲಕರು ಮೂಲತಃ ಸೂರತ್ನ ಶಾಸ್ತ್ರಿ ನಗರದವರಾಗಿದ್ದು, ಆತನ ತಾಯಿ ಆಂಟಿಮಾ ಉಸಿರಾಟದ ತೊಂದರೆ ಅನುಭವಿಸುತ್ತಿರುವುದರಿಂದ ಅವರನ್ನು ಕೆಇಎಂ ಆಸ್ಪತ್ರೆ ಐಸಿಯುಗೆ ದಾಖಲಿಸಿದ್ದರು. ಈ ವೇಳೆ ಹರಿಜನ್ ತನ್ನ ಹೆಂಡತಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದು, ಮಗುವನ್ನು ನೋಡಲು ಹುಡುಕಾಟ ನಡೆಸಿದ್ದಾನೆ.
ನಂತರ ಅಲ್ಲಿ ಕೆಲದಿನಗಳಿಂದ ಮಗುವಿನೊಂದಿಗೆ ಆಟವಾಡುತ್ತಿದ್ದ ವ್ಯಕ್ತಿಯೊಬ್ಬ ಆಹಾರ ತರಲು ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಅವನ ತಾಯಿ ಹೇಳಿದ್ದಾರೆ. ಇದಾದ ಕೆಲವು ಗಂಟೆಗಳ ನಂತರವೂ ಮಗು ಬಾರದ ಕಾರಣ ಮಗು ಕಾಣೆಯಾಗಿರುವುದರ ಬಗ್ಗೆ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಭದ್ರೆತೆಯ ಕಣ್ತಪ್ಪಿಸಿ ಟವಿಕೆ ಮುಖ್ಯಸ್ಥ, ನಟ ದಳಪತಿ ವಿಜಯ್ ಮನೆಗೆ ನುಗ್ಗಿದ ಯುವಕ; ಮುಂದೇನಾಯ್ತು ನೋಡಿ| Thalapathy Vijay
ದಾದರ್ ಮತ್ತು ಸಾವಂತವಾಡಿ ನಡುವೆ ಚಲಿಸುವ ತುತಾರಿ ಎಕ್ಸ್‌ಪ್ರೆಸ್‌ನ ಎಸ್ -2 ಕೋಚ್‌ನಲ್ಲಿ ಮಗುವಿನೊಂದಿಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದಾರೆ ಎಂದು ಸಿಎಸ್‌ಎಂಟಿಯ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದ ನಂತರ, ಆರೋಪಿ ಉದಲೇಕರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಇನ್ಸ್ಪೆಕ್ಟರ್ ಅರ್ಚನಾ ದುಸಾನೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡವು ಥಾಣೆ ನಿಲ್ದಾಣದಲ್ಲಿ ಶಂಕಿತನನ್ನು ಬಂಧಿಸಿದ್ದಾರೆ.
ಈ ವೇಳೆ ಆರೋಪಿಯನ್ನು ವಿಚಾರಣೆ ನಡೆಸಿದ ಪೊಲೀಸರು ಆತ ಮಗುವನ್ನು ಕೆಇಎಂ ಆಸ್ಪತ್ರೆಯ ಆವರಣದಲ್ಲಿ ಅಪಹರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಐಪಿಸಿ ಸೆಕ್ಸನ್ 137(2) ಅಡಿಯಲ್ಲಿ ಉದಲೇಕರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಗುವನ್ನು ನಿಜವಾದ ವಾರಸುದಾರರಿಗೆ ತಲುಪಿಸಿದ್ದಾರೆ. (ಏಜೆನ್ಸೀಸ್)