ನಾನು ಮುಸ್ಲಿಂ ಆದರೆ, ಕೇಸರಿ ಬಣ್ಣ ನನಗೆ ತುಂಬಾ ಇಷ್ಟ: iPhone 17 ಖರೀದಿದಾರನ ಮಾತು ಎಲ್ಲೆಡೆ ವೈರಲ್​ !

untitled-design-2025-09-19t125159941-68cd04a7f32dc
Published on

iPhone 17 : ಭಾರತದಾದ್ಯಂತ ಇಂದು (ಸೆಪ್ಟೆಂಬರ್ 19) ಐಫೋನ್​ 17 ಸರಣಿ ಮಾರಾಟ ಆರಂಭವಾಗುತ್ತಿದ್ದಂತೆ ಆಪಲ್​ ಬಳಕೆದಾರರು ಖರೀದಿಗಾಗಿ ಅಂಗಡಿಗಳಿಗೆ ಮುತ್ತಿಗೆ ಹಾಕಿದ್ದಾರೆ. ಇನ್ನು ದೆಹಲಿ, ಮುಂಬೈ, ಪುಣೆ, ಮತ್ತು ಬೆಂಗಳೂರಿನಲ್ಲಿರುವ ಅಧೀಕೃತ ಆಪಲ್​ ಅಂಗಡಿಗಳ ಹೊರಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆಯಲ್ಲಿ ಐಪೋನ್ 17 ನ್ನು ಖರೀದಿಸಿದವರಲ್ಲಿ ಒಬ್ಬರ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ದೆಹಲಿಯ ಸಾಕೇತ್​ನಲ್ಲಿರುವ ಅಧೀಕೃತ ಆಪಲ್​ ಮಾರಾಟಗಾರರ ಅಂಗಡಿಯಲ್ಲಿ ಪೋನ್​ ಖರೀದಿಸಿದ ಯುವಕನೊಬ್ಬ ಸಂತೋಷ ವ್ಯಕ್ತಪಡಿಸಿದ್ದು, ಮೊಬೈಲ್​ ಬಣ್ಣವು ಬಹಳ ಸುಂದರವಾಗಿದೆ. ಇದಲ್ಲದೇ, ಈ ಬಣ್ಣವು ವಿಶೇಷವಾಗಿ ಕ್ರೇಜ್​ ಹೊಂದಿದೆ. ಏಕೆಂದರೆ ಭಾರತದಲ್ಲಿ ಕೇಸರಿ ಬಹಳ ವಿಶೇಷವಾಗಿದೆ. ನಾನು ಮುಸ್ಲಿಂ ಆದರೆ, ನನಗೆ ಈ ಬಣ್ಣ ತುಂಬಾ ಇಷ್ಟ. ಇನ್ನು ಮೊಬೈಲ್​ ಖರೀದಿಗಾಗಿ ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದೇನೆ ಎಂದು ಹೆಳಿದರು.

ಆಪಲ್‌ನ ಬಹು ನಿರೀಕ್ಷಿತ ಐಫೋನ್ 17 ಸರಣಿಯು ಈಗ ಭಾರತದಾದ್ಯಂತ ಖರೀದಿಸಲು ಲಭ್ಯವಾಗಿದ್ದು, ಯಶಸ್ವಿ ಪೂರ್ವ-ಆರ್ಡರ್​ಗಳ ನಂತರ, ಮುಕ್ತ ಮಾರಾಟದ ಆರಂಭವನ್ನು ಸೂಚಿಸಲಾಗುತ್ತದೆ. ಆಗ ಅಗತ್ಯ ಇರುವಂತವರು ಹೊಸ ಐಫೋನ್​ ಸರಣಿಯನ್ನು ಫ್ಲಿಪ್​ಕಾರ್ಟ್​, ಅಮೆಜಾನ್​ನಂತಹ ಇ ಕಾಮರ್ಸ್​ ಫ್ಲಾಟ್​ಫಾರ್ಮ್​ಗಳಲ್ಲಿ ಖರೀದಿಸಬಹುದಾಗಿದೆ.

ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಬ್ಲಿಂಕಿಟ್ ಮತ್ತು ಜೆಪ್ಟೊ ಕೂಡ ಐಫೋನ್ 17 ಅನ್ನು ನೀಡುತ್ತಿದ್ದು, ಇದು ಆಯ್ದ ಪ್ರದೇಶಗಳಲ್ಲಿ 10 ನಿಮಿಷಗಳಲ್ಲಿ ವಿತರಣೆ ಲಭ್ಯವಿದೆ. ಅಮೆಜಾನ್​ ಇಂಡಿಯಾ ಹಾಗೂ ಫ್ಲಿಪ್​ಕಾರ್ಟ್​ ಎರಡೂ ಆಕರ್ಷಕ ಉಡಾವಣಾ ಕೊಡುಗೆಗಳು ಹಾಗೂ ಎಎಂಐ ಆಯ್ಕೆಗಳನ್ನು ಪಟ್ಟಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net