ಭದ್ರೆತೆಯ ಕಣ್ತಪ್ಪಿಸಿ ಟವಿಕೆ ಮುಖ್ಯಸ್ಥ, ನಟ ದಳಪತಿ ವಿಜಯ್ ಮನೆಗೆ ನುಗ್ಗಿದ ಯುವಕ; ಮುಂದೇನಾಯ್ತು ನೋಡಿ| Thalapathy Vijay

Untitled design (46)
Published on

Thalapathy Vijay: ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಯುವಕನೊಬ್ಬ ತಮಿಳು ಸೂಪರ್ ಸ್ಟಾರ್, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಮನೆಗೆ ನುಗ್ಗಿರುವ ಘಟನೆ ನಡೆದಿದೆ. ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ ಎಂದು ಶುಕ್ರವಾರ(ಸೆ. 19) ವರದಿಯಾಗಿದೆ.

ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ನೀಲಂಕರೈನಲ್ಲಿರುವ ವಿಜಯ್ ಮನೆಗೆ 24 ವರ್ಷದ ಯುವಕನೊಬ್ಬ ನುಗ್ಗಿ ಆತಂಕ ಸೃಷ್ಟಿಸಿದ್ದನು. ಮನೆಯ ಟೆರೇಸ್​ನಲ್ಲಿ ಯುವಕನನ್ನು ಭದ್ರತಾ ಸಿಬ್ಬಂದಿ ಪತ್ತೆ ಹೆಚ್ಚಿದ್ದು, ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಬಗ್ಗೆ ಟಿವಿಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಘಟನೆಯನ್ನು ದೃಢಪಡಿಸಿದ್ದು, ಆ ವ್ಯಕ್ತಿಯನ್ನು  ವಶಕ್ಕೆ ಪಡೆದಿದ್ದೇವೆ. ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದಿದ್ದು, ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದೇವೆ. ವಿಜಯ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದರೂ ಆ ವ್ಯಕ್ತಿ ಮನೆಗೆ ಹೇಗೆ ಪ್ರವೇಶ ಪಡೆದನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ದಳಪತಿ ವಿಜಯ್ ಅವರ ಹೆಚ್ಚುತ್ತಿರುವ ರಾಜಕೀಯ ಜನಪ್ರಿಯತೆಯನ್ನು, ಅಪಾರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯ ಅವರಿಗೆ ಕೇಂದ್ರ ಮೀಸಲು ಪಡೆ(ಸಿಆರ್​ಪಿಎಫ್​) ಹೊಂದಿದ ವೈ-ಕೆಟಗರಿ ಭದ್ರತೆಯನ್ನು ನೀಡಿದೆ.

ಕಳೆದ ಶನಿವಾರ ತಿರುಚ್ಚಿಯಿಂದ ವಿಜಯ್ ರಾಜ್ಯಾದ್ಯಂತ ರಾಜಕೀಯ ಪ್ರವಾಸ ಆರಂಭಿಸಿದ್ದಾರೆ. ಅವರ ಭಾಷಣ ಕೇಳಲು ಸಾವಿರಾರು ಬೆಂಬಲಿಗರು ಸೇರಿದ್ದರು. ಮತ್ತೆ ನಾಳೆ ನಾಗಪಟ್ಟಣದಿಂದ ತಮ್ಮ ಪ್ರಚಾರವನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net