ನ್ಯೂಸ್

ಬಾಲಿವುಡ್​ಗೆ 'ಮಹಾನಟಿ' ಕೀರ್ತಿ ಸುರೇಶ್; ವರುಣ್ ಧವನ್​ಗೆ ಇವರೇ ನಾಯಕಿ?

ಮೋಹನ್​ ಶೆಟ್ಟಿ

ಮುಂಬೈ: ದಕ್ಷಿಣ ಭಾರತದ ಸ್ಟಾರ್​​ ನಟಿ ಕೀರ್ತಿ ಸುರೇಶ್ ಇದೀಗ ಬಾಲಿವುಡ್​​ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದ್ದು, ನಟ ವರುಣ್​ ಧವನ್​ ಅಭಿನಯಿಸುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ಕೀರ್ತಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ವಿಶೇಷ ಛಾಪು ಮೂಡಿಸಿರುವ ನಟಿ ಕೀರ್ತಿ ಸುರೇಶ್, ಇದೀಗ ಅನ್ಯ ಚಿತ್ರರಂಗದತ್ತ ಮುಖ ಮಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. 'ಮಹಾನಟಿ' ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಕೀರ್ತಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಇದಾದ ಬಳಿಕ ಅವರಿಗೆ ಹಲವು ಚಿತ್ರರಂಗದಿಂದ ಉತ್ತಮ ಆಫರ್​ಗಳು ಹುಡುಕಿಕೊಂಡು ಬಂದಿತು. ಆದ್ರೆ, ಕಥೆ, ಪಾತ್ರದ ಆಯ್ಕೆಯಲ್ಲಿ ಹೆಚ್ಚು ಸೂಕ್ಷ್ಮತೆ ವಹಿಸಿದ ಅವರು, ಇದೀಗ ಬಾಲಿವುಡ್​​ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬುದು ವರದಿಯಾಗಿದೆ.

ತಮಿಳು ಚಲನಚಿತ್ರ ನಿರ್ಮಾಪಕ ಕಾಲೀಸ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್‌ ಚಿತ್ರದಲ್ಲಿ ವರುಣ್ ಧವನ್​​ಗೆ ನಾಯಕಿಯಾಗಿ ಕೀರ್ತಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರು ಬಾಲಿವುಡ್​​ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ವರುಣ್ ನಟಿಸಲಿದ್ದು, ಸಿನಿ 1 ಸ್ಟುಡಿಯೋಸ್ ಮತ್ತು ಎ ಫಾರ್ ಆಪಲ್ ಸ್ಟುಡಿಯೋಸ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ,(ಏಜೆನ್ಸೀಸ್).