ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಎಎಸ್ ಅಧಿಕಾರಿಯೊಬ್ಬರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಬೆಂಗಳೂರಿನ ಸಂಜಯ್ನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಸೋಲಿನ ಭಯ ಕಾಡ್ತಿದೆ!
ವೃತ್ತಿಯಲ್ಲಿ ವಕೀಲರಾಗಿದ್ದ ಕೆಎಎಸ್ ಅಧಿಕಾರಿಯ ಪತ್ನಿ ಚೈತ್ರಾ ಗೌಡ, ಸಂಜಯ್ನಗರದ ನಿವಾಸವೊಂದರಲ್ಲಿ ಸೀಲಿಂಗ್ ಫ್ಯಾನ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಎಂದು ಹೇಳಲಾದ ಈ ಘಟನೆ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
ಇದನ್ನೂ ಓದಿ: ರಾಜಕೀಯದಲ್ಲಿ ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು, ಕೆಳಗಿದ್ದವನು ಮೇಲೇರಬೇಕು; ಪ್ರಧಾನಿಗೆ ಸಿಎಂ ಟಾಂಗ್
ಮೃತ ಚೈತ್ರಾ ಗೌಡ, ಮನೆಯಲ್ಲಿದ್ದ ಫ್ಯಾನ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶವವಿದ್ದ ಕೋಣೆಯಲ್ಲಿ ಯಾವುದಾದರೂ ಡೆತ್ ನೋಟ್ ಇರಬಹುದೇ ಎಂದು ಪರಿಶೀಲಿಸಿ ನೋಡಿದಾಗ ಅಲ್ಲಿಯೂ ಏನೂ ಸಿಕ್ಕಿಲ್ಲ. ಇದು ಭಾರೀ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದು, ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸಂಜಯ್ನಗರದ ಪೊಲೀಸರು, ಚುರುಕಿನ ತನಿಖೆ ಕೈಗೊಂಡಿದ್ದಾರೆ.