ನ್ಯೂಸ್

ಫಸ್ಟ್​ ಡೋಸ್​ನಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್​; ಮೊದಲ ಡೋಸ್​ ಲಸಿಕೀಕರಣ ಪರ್ಸೆಂಟೇಜ್​ ಇಲ್ಲಿದೆ ನೋಡಿ...

ಬೆಂಗಳೂರು: ಉತ್ತಮ ಪರೀಕ್ಷಾ ಪ್ರಯೋಗದಿಂದ ದೇಶದಲ್ಲೇ ಮೊದಲನೆಯದಾಗಿ ಒಮಿಕ್ರಾನ್​ ಪತ್ತೆ ಮಾಡಿರುವ ಖ್ಯಾತಿಗೆ ರಾಜ್ಯ ರಾಜಧಾನಿ ಬೆಂಗಳೂರು ಪಾತ್ರವಾಗಿದೆ. ಇದೀಗ ಕರೊನಾ ವಿರುದ್ಧದ ಲಸಿಕೀಕರಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ತಲುಪಿದೆ.

ಮೊದಲ ಡೋಸ್​ ಲಸಿಕೆ ನೀಡಿಕೆ ಸಂಬಂಧಿಸಿದಂತೆ ದೇಶದಲ್ಲೇ ಅತ್ಯಧಿಕ ಸಾಧನೆ ರಾಜ್ಯದಿಂದಾಗಿದ್ದು, ಕರ್ನಾಟಕ ಭಾರತದಲ್ಲಿ ಮೊದಲ ಸ್ಥಾನ ತಲುಪಿದೆ. ಅತಿಹೆಚ್ಚು ಮೊದಲ ಡೋಸ್ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂಬುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಡಿ. 8ಕ್ಕೆ ಅಂತ್ಯಗೊಂಡಿರುವ ಲೆಕ್ಕಾಚಾರದ ಪ್ರಕಾರ ಫಸ್ಟ್​ ಡೋಸ್ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಕರ್ನಾಟಕ ಶೇ. 94.38 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಮತ್ತು ಮಧ್ಯಪ್ರದೇಶ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.