Karnataka Bandh: ಇತ್ತೀಚೆಗೆ ಮಹಾರಾಷ್ಟ್ರ ಮರಾಠಿ ಪುಂಡರು ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಮಾ.22ರಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದಾರೆ. ಬಂದ್ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ನೈತಿಕ, ನೇರ ಬಂಬಲ ಕೊಟ್ಟಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ: Reshuffle in AAP | ರಾಜ್ಯ ಘಟಕಗಳಿಗೆ ಹೊಸ ಮುಖ್ಯಸ್ಥರ ನೇಮಕ; ಸೌರಭ್ ಭಾರದ್ವಾಜ್ಗೆ ದೆಹಲಿ ಉಸ್ತುವಾರಿ
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯಲಿರುವ ನಾಳಿನ ಕರ್ನಾಟಕ ಬಂದ್ಗೆ ಹಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಬಂದ್ಗೆ ಬೆಂಬಲ ಸೂಚಿಸಿಲ್ಲ. ಬದಲಿಗೆ ವಿರೋಧ ವ್ಯಕ್ತಪಡಿಸಿದೆ. ಪ್ರತಿಭಟನೆ ಮೂಲಕ ಬಂದ್ಗೆ ಕರೆ ಕೊಡುವ ಅವಶ್ಯಕತೆ ಇರಲಿಲ್ಲ. ತಮ್ಮ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಬಹುದಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಕರ್ನಾಟಕ ಬಂದ್ ಹಿನ್ನೆಲೆ ರಾಜ್ಯದಲ್ಲಿ ಬಸ್, ಆಟೋ ಸಂಚಾರ, ಹೋಟೆಲ್, ಶಾಪಿಂಗ್ ಮಾಲ್ ತೆರೆದಿರುತ್ತವೆಯೇ? ಬಂದ್ ಕಾವೇರಿರುವ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆಯೇ ಎಂಬ ಹತ್ತು ಹಲವು ಪ್ರಶ್ನೆಗಳು ರಾಜ್ಯದ ಜನತೆಯನ್ನು ಬೆಂಬಿಡದೆ ಕಾಡುತ್ತಿದೆ. ಅಸಲಿಗೆ ಏನೇನು ಇರಲಿದೆ? ಇರವುದಿಲ್ಲ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.