ಕಳೆದ ನಾಲ್ಕು ತಿಂಗಳಿಂದ ಕಪಿಲ್ ಶರ್ಮಾ ನಡೆಸಿಕೊಡುವ ಕಾಮಿಡಿ ಶೋ ಸಹ ಕರೊನಾದಿಂದಾಗಿ ಸ್ಥಗಿತಗೊಂಡಿತ್ತು. ಹಳೇ ಏಪಿಸೋಡ್ಗಳನ್ನೇ ಮರುಪ್ರಸಾರ ಮಾಡಲಾಗಿತ್ತು. ಇದೀಗ ಶನಿವಾರದಿಂದ ಹೊಸ ಶೋಗಳ ಆರಂಭವಾಗಿದೆ. ಆ ಮರುಆರಂಭವಾದ ಶೋನ ಮೊದಲ ಏಪಿಸೋಡ್ನಲ್ಲಿ ಸೋನು ಸೂದ್ ಅತಿಥಿಯಾಗಿ ಆಗಮಿಸಿದ್ದರು. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಕಾಮಿಡಿ ಶೋ. ಆದರೆ, ಶನಿವಾರದ ಶೋ ಭಾವುಕವಾಗಿತ್ತು. ಸ್ವತಃ ಸೋನು ಸೂದ್ ಕಣ್ಣೀರು ಹಾಕಿದರು.
ಇದನ್ನೂ ಓದಿ: ಆತನನ್ನು ಆ ಸ್ಥಿತಿಯಲ್ಲಿ ನೋಡಲು ನನಗೆ ಇಷ್ಟವಿರಲಿಲ್ಲ…
ಕಳೆದ ನಾಲ್ಕು ತಿಂಗಳಿಂದ ಒಂದಲ್ಲ ಒಂದು ಕಾರ್ಯದಲ್ಲಿ ಸೂನು ಸೂದ್ ತೊಡಗಿಸಿಕೊಂಡಿದ್ದರು. ಸಾವಿರಾರು ಮಂದಿಯನ್ನು ಅವರವರ ಊರು ಮುಟ್ಟಿಸಿದ್ದರು. ಕೆಲಸ ಇಲ್ಲದವರಿಗೆ ಕೆಲಸ ನೀಡಿದ್ದರು. ನಿರ್ಗತಿಕರಿಗೆ ಧನ ಸಹಾಯ ಮಾಡಿದ್ದರು. ಒಟ್ಟಾರೆಯಾಗಿ ಇಡೀ ದೇಶವೇ ಅವರ ಕಾರ್ಯವನ್ನು ಮುಕ್ತವಾಗಿ ಕೊಂಡಾಡಿತ್ತು. ಯಾರೂ ಮಾಡದ ಆ ಸೇವೆಯನ್ನು ಸೋನು ಸೂದ್ ಕಿಂಚಿತ್ತೂ ಬೇಸರ ಪಟ್ಟುಕೊಳ್ಳದೆ ಮಾಡಿದ್ದರು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಕಪಿಲ್ ಶರ್ಮಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅವರೊಂದಿಗೆ ಆ ಪಯಣವನ್ನು ಮತ್ತೆ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಬಿಹಾರ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ ರಿಯಾ ಚಕ್ರವರ್ತಿ
ಶೋದಲ್ಲಿ ಹಾಸ್ಯದ ಜತೆಗೆ ಸೋನು ಸೂದ್ ಮಾಡಿದ ಕೆಲಸಗಳಿಗೆ ಜನತೆಯ ಕೃತಜ್ಞತೆ ಅರ್ಪಿಸಿದ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು. ಆ ವಿಡಿಯೋ ತುಣುಕುಗಳನ್ನು ನೋಡಿ ಸೋನು ಅಕ್ಷರಶಃ ಕಣ್ಣೀರಾದರು. ಅವರ ಮೊಗದಲ್ಲಿ ಸಾರ್ಥಕ ಭಾವ ಕಾಣುತ್ತಿತ್ತು. ಅವರ ಆ ಭಾವುಕ ಕ್ಷಣಗಳ ವಿಡಿಯೋಗಳು ಇಲ್ಲಿವೆ.