ವಾಷಿಂಗ್ಟನ್: ಯಾವುದೇ ಪ್ರಶಸ್ತಿಯೂ ಸುಮ್ಮನೆ ಸಿಕ್ಕುವುದಿಲ್ಲ. ನಾವು ಪಟ್ಟ ಪರಿಶ್ರಮ, ನಮ್ಮ ಸಾಧನೆಗೆ ಗೌರವಸೂಚಕವಾಗಿ ಸಿಗುವ ಪ್ರಶಸ್ತಿಗೆ ನಾವು ಅಷ್ಟೇ ಗೌರವವನ್ನು ನೀಡಬೇಕು. ಆದರೆ ಕೆಲವರು ತಮ್ಮ ಅಹಂ ಮೂಲಕ ಪ್ರಶಸ್ತಿಗಳನ್ನು ಕಾಲ ಕಸದಂತೆ ಕಾಣುತ್ತಾರೆ. ಆದರೂ ಅಂತವರನ್ನೇ ಪ್ರಶಸ್ತಿಗಳು ಹುಡುಕಿಕೊಂಡು ಹೋಗುತ್ತವೆ ಅಂದರೆ ನೀವು ನಂಬಲೇ ಬೇಕು.
ಅಮೆರಿಕದ ಪ್ರಸಿದ್ಧ ರ್ಯಾಪರ್, ಕಂಪೋಸರ್ ಮತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಕಾನ್ಯೆ ವೆಸ್ಟ್ 2021ರ ಗ್ರ್ಯಾಮಿ ಅವಾರ್ಡ್ಸ್ಗೆ ನಾಮಿನೇಟ್ ಆಗಿದ್ದಾರೆ. ಅವರ ಆಲ್ಬಂ ಜೀಸಸ್ ಈಸ್ ಕಿಂಗ್ನ್ನು ಅತ್ಯುತ್ತಮ ಸಮಕಾಲೀನ ಕ್ರಿಶ್ಚಿಯನ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ನಾಮಿನೇಟ್ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಇದೀಗ ಕಾನ್ಯೆ ಅವರು ನಾಮಿನೇಟ್ ಆದವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ರ್ಯಾಪರ್ಗೇ ಇದೀಗ ಮತ್ತೊಮ್ಮೆ ಪ್ರಶಸ್ತಿ ಪಡೆಯುವ ಅವಕಾಶ ಸಿಕ್ಕಿದೆ. ನಾಮಿನೇಟ್ ಆದವರ ಪೈಕಿ ಕಾನ್ಯೆ ಅವರಿಗೇ ಪ್ರಶಸ್ತಿ ಸಿಕ್ಕರೆ ಅವರು ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆಯೇ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. (ಏಜೆನ್ಸೀಸ್)