ಬೆಂಗಳೂರು: ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ ನಿರ್ಮಿಸಿರುವ, ನಾಗೇಂದ್ರ ಅರಸ್ ನಿರ್ದೇಶಿಸಿರುವ 'ಅದನೇನ್ ಕೇಳ್ತಿ' ಚಿತ್ರ ಆಗಸ್ಟ್ 22ರಂದು ವಿ 4 ಸ್ಟ್ರೀಮಿಂಗ್ (V4stream) ಓಟಿಟಿ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ.
16 ಸನ್ನಿವೇಶಗಳ ಚಿತ್ರೀಕರಣ ಕೇವಲ ನಾಲ್ಕು ವರೆ ದಿನಗಳಲ್ಲಿ ಮುಕ್ತಾಯವಾಗಿರುವುದು ವಿಶೇಷ. ಮನರಂಜನೆ ಪ್ರಧಾನವಾಗಿರುವ ಈ ಚಿತ್ರಕ್ಕೆ ಓಟಿಟಿ ವೇದಿಕೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಿರ್ದೇಶನದ ಜತೆಗೆ ಕಥೆ ಬರೆದು ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಎಂ.ಬಿ. ಅಳಿಕಟ್ಟಿ ಛಾಯಾಗ್ರಹಣ, ಸೇನಾಪತಿ ಅವರ ಸಂಗೀತ ಈ ಚಿತ್ರಕ್ಕಿದೆ. ನಿರಂಜನ್ ದೇಶಪಾಂಡೆ, ಪ್ರವೀಣ್ ಕುಮಾರ್ (ಕಾಮಿಡಿ ಕಿಲಾಡಿಗಳು), ಅನಿಲ್ ಯಾದವ್, ಹ್ಯಾರಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.