Kanguva Oscars: 2024ರ ನವೆಂಬರ್ನಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ತಮಿಳು ಸೂಪರ್ಸ್ಟಾರ್ ಸೂರ್ಯ ಅಭಿನಯದ 'ಕಂಗುವಾ' ಚಿತ್ರ ಇದೀಗ ಆಸ್ಕರ್ ರೇಸ್ನಲ್ಲಿರುವುದು ಸದ್ಯ ಸಿನಿಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಸಿರುತೈ ಶಿವ ನಿರ್ದೇಶನದ ಹಾಗೂ ಸ್ಟುಡಿಯೋ ಗ್ರೀನ್ ಜ್ಞಾನವೇಲ್ ರಾಜ ನಿರ್ಮಿಸಿದ ಈ ಚಿತ್ರ, ಬಾಕ್ಸ್ ಆಫೀಸ್ನಲ್ಲಿ ಲಾಭ ಗಳಿಸದೆ, ಬಿಡುಗಡೆಗೊಂಡ ಕೆಲವೇ ವಾರಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಯಿತು. ಇಷ್ಟಾದರೂ ಸಹ ಚಿತ್ರವು ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವುದು ಸದ್ಯ ಹಲವರ ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದಿನನಿತ್ಯ ಚಿಕನ್ ತಿನ್ನುತ್ತಿದ್ದೀರಾ? ಪ್ರತಿದಿನ ಚಿಕನ್ ತಿನ್ನೋದು ಜೀವಕ್ಕೆ ಸಖತ್ ಡೇಂಜರ್ !Chicken Not Good For Health
ಭಾರತೀಯ ಸಿನಿ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಅವರು, "ಬ್ರೇಕಿಂಗ್: ಕಂಗುವಾ 2025ರ ಆಸ್ಕರ್‌ಗೆ ಪ್ರವೇಶಿಸಿದೆ" ಎಂದು ಬರೆದು, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಹೊರಬೀಳುತ್ತಿದ್ದಂತೆ ಪೋಸ್ಟ್ ಕ್ಷಣ ಮಾತ್ರದಲ್ಲಿ ವೈರಲ್ ಆಗಿದ್ದು, ಸೂರ್ಯ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ. ಒಂದೆಡೆ ನಟನ ಫ್ಯಾನ್ಸ್ಗೆ ಈ ಸಂಗತಿ ಸಂತಸ ನೀಡಿದರೆ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯದೆ ಸೋಲುಂಡ ಚಿತ್ರ ಹೇಗೆ ಆಸ್ಕರ್ ರೇಸ್‌ಗೆ ಕಾಲಿಟ್ಟಿತು ಎಂಬ ಚರ್ಚೆಗಳು ಮತ್ತೊಂದೆಡೆ.
ಈ ಹಿಂದೆ 'ಕಂಗುವ' ವಿರುದ್ಧ ಜಾಲತಾಣಗಳಲ್ಲಿ ನೆಗೆಟಿವ್ ಪ್ರಚಾರವನ್ನು ಖಂಡಿಸಿ ನಟಿ ಹಾಗೂ ಸೂರ್ಯ ಪತ್ನಿ ಜ್ಯೋತಿಕಾ ಪೋಸ್ಟ್ ಹಂಚಿಕೊಂಡಿದ್ದರು. ಉದ್ದೇಶಪೂರ್ವಕವಾಗಿ ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆಗಳನ್ನು ಹಾಕಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಆದರೆ, ಜ್ಯೋತಿಕಾರನ್ನು ಸಹ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಕೆಲವರು ನೆಗೆಟಿವ್ ಪ್ರಚಾರ ಮಾಡಿದರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿದೆ ಎಂದು ಅಭಿಪ್ರಾಯಿಸಿದ್ದರು. ಒಟ್ಟಾರೆ ಫ್ಯಾಮಿಲಿ ಆಡಿಯನ್ಸ್ ನೋಡುವಂತಹ 'ಕಂಗುವ' ಇದೀಗ ಆಸ್ಕರ್ ಓಟದಲ್ಲಿ ಹೆಜ್ಜೆಯಿಟ್ಟಿರುವುದು ನಟ ಸೂರ್ಯ ಹಾಗೂ ಚಿತ್ರತಂಡಕ್ಕೆ ಖುಷಿ ವಿಷಯವಾಗಿದೆ,(ಏಜೆನ್ಸೀಸ್).