ದಿನನಿತ್ಯ ಚಿಕನ್ ತಿನ್ನುತ್ತಿದ್ದೀರಾ? ಪ್ರತಿದಿನ ಚಿಕನ್​ ತಿನ್ನೋದು ಜೀವಕ್ಕೆ ಸಖತ್​​ ಡೇಂಜರ್ !Chicken Not Good For Health

Chicken
Published on: 

Chicken Not Good For Health: ಚಿಕನ್ ( Chicken ) ಎಂದರೆ ಮಾಂಸಹಾರಿಗಳಿಗೆ ಸಖತ್​ ಇಷ್ಟ ( Consumption ) ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಚಿಕನ್ ತಿಂದರೆ ಆರೋಗ್ಯವಾಗಿರುತ್ತದೆ ( Healt ). ಆದರೆ ನೀವು ದಿನನಿತ್ಯ ಮಿತಿಯನ್ನು ಮೀರಿ ಚಿಕನ್ ತಿಂದರೆ ಅದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹದು. ದಿನವೂ ಚಿಕನ್ ತಿನ್ನುವುದರಿಂದ ಆಗುವ ಆರೋಗ್ಯದ ಪರಿಣಾಮಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ....

ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ

ನೀವು ಸರಿಯಾದ ಪ್ರಮಾಣದಲ್ಲಿ ಕೋಳಿ ಮಾಂಸವನ್ನು ಸೇವಿಸಿದರೆ, ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಮಿತಿ ಮೀರಿ ತಿನ್ನುವುದು ಅಪಾಯಕಾರಿ. ಡೀಪ್ ಫ್ರೈಡ್ ಚಿಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ವರದಿಯಾದ ಅಧ್ಯಯನದ ಪ್ರಕಾರ, ಕೋಳಿ ಮಾಂಸದ ಹೆಚ್ಚಿನ ಸೇವನೆಯು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಎಣ್ಣೆಯಲ್ಲಿ ಕರಿದ ಚಿಕನ್ ಬದಲಿಗೆ ಗ್ರಿಲ್ಡ್, ಬೇಯಿಸಿದ, ಹುರಿದ ಚಿಕನ್ ತಿನ್ನುವುದು ಉತ್ತಮ.

Chicken Liver

ಚಿಕನ್ ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವ ಆಹಾರ ಪದಾರ್ಥವಾಗಿದೆ. ಆದ್ದರಿಂದ ಇದು ದೇಹದಲ್ಲಿ ಹೆಚ್ಚಿನ ತಾಪಮಾನವನ್ನು ಉಂಟುಮಾಡುತ್ತದೆ. ಇದು ಆಗಾಗ್ಗೆ ಶೀತ  ಉಂಟುಮಾಡುತ್ತದೆ. ಇದು ವಿಶೇಷವಾಗಿ ಬೇಸಿಗೆಯಲ್ಲಿ ಸಂಭವಿಸುತ್ತದೆ. ದಿನನಿತ್ಯ ಚಿಕನ್ ತಿನ್ನುವವರು ಇದು ಅಂತಹ ಪರಿಸ್ಥಿತಿ ಬಂದರೆ, ಕೆಲವು ದಿನಗಳವರೆಗೆ ಚಿಕನ್ ಸೇವನೆಯನ್ನು ತಪ್ಪಿಸುವುದು ಉತ್ತಮ.

ಚಿಕನ್ ಬಿರಿಯಾನಿ, ಬಟರ್ ಚಿಕನ್, ಫ್ರೈಡ್ ಚಿಕನ್ ಗಳಲ್ಲಿ ಕ್ಯಾಲೋರಿ ಹೆಚ್ಚಾಗಿರುತ್ತದೆ. ಹಾಗಾಗಿ ಇವುಗಳನ್ನು ವಾರಕ್ಕೊಮ್ಮೆ ತೆಗೆದುಕೊಂಡರೂ ಪರವಾಗಿಲ್ಲ. ಆದರೆ ನಿಯಮಿತ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಕೊಲೆಸ್ಟ್ರಾಲ್ ಮಟ್ಟವೂ ಮಿತಿ ಮೀರಿದೆ.

ತೂಕ ಹೆಚ್ಚಾಗುವುದು

Fried Chicken

ಕೆಲವು ಕೋಳಿ ಪ್ರಭೇದಗಳು ಮೂತ್ರದ ಸೋಂಕನ್ನು ಉಂಟುಮಾಡಬಹುದು. ಕೋಳಿಯಲ್ಲಿ ಇ.ಕೋಲಿ ಎಂಬ ಬ್ಯಾಕ್ಟೀರಿಯಾವಿದೆ. ಹಾಗಾಗಿ ಆ್ಯಂಟಿಬಯೋಟಿಕ್ ಇಲ್ಲದೆ ಬೆಳೆದ ಚಿಕನ್ ತಿನ್ನುವುದು ಉತ್ತಮ.

ಮೂತ್ರನಾಳದ ಸೋಂಕು