ನ್ಯೂಸ್

ಕಂಗನಾ ನಟನೆಯ Emergency ಚಿತ್ರಕ್ಕೆ ಕಡೆಗೂ ಸಿಕ್ತು ಪ್ರಮಾಣಪತ್ರ; ಸಿನಿಮಾ ರಿಲೀಸ್​ ಯಾವಾಗ ಗೊತ್ತಾ?

ಮುಂಬೈ: ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ವಿವಾದಗಳಿಂದಲೇ (Controversy) ಹೆಚ್ಚು ಸದ್ದು ಮಾಡುತ್ತಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್​ (kangana Ranaut) ನಟನೆಯ ಎಮರ್ಜೆನ್ಸಿ (Emergency) ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣಪತ್ರ ವಿತರಿಸಿದೆ.

ಈ ಕುರಿತು ನಟಿ, ಬಿಜೆಪಿ ಸಂಸದೆ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ತಾಳ್ಮೆಯಿಂದ ಕಾದಿದ್ದಕ್ಕೆ ಮತ್ತು ಬೆಂಬಲಿಸಿದ್ದಕ್ಕೆ ಧನ್ಯವಾದಗಳು (Thanks) ಎಂದು ಬರೆದುಕೊಂಡಿದ್ದಾರೆ.

ನಮ್ಮ ಸಿನಿಮಾ ಎಮರ್ಜೆನ್ಸಿಗೆ (Emergency) ಸೆನ್ಸಾರ್‌ ಪ್ರಮಾಣಪತ್ರ (Censor Certificate) ಸ್ವೀಕರಿಸಿದ್ದೇವೆ ಎಂದು ತಿಳಿಸಲು ಸಂತಸವೆನಿಸುತ್ತಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ (Release Date) ಪ್ರಕಟಿಸುತ್ತೇವೆ. ತಾಳ್ಮೆಯಿಂದ ಕಾದಿದ್ದಕ್ಕೆ ಮತ್ತು ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್​ (Tweet) ಮಾಡಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಎಮರ್ಜೆನ್ಸಿ ಚಿತ್ರವು ಈ ತಿಂಗಳಾಂತ್ಯ ಅಥವಾ ನವೆಂಬರ್​ ಎರಡನೇ ವಾರದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಈಗಾಗಲೇ ವಿಚಾದಗಳಿಂದಲೇ ಸಾಕಷ್ಟು ಪ್ರಚಾರವನ್ನು ಪಡೆದಿರುವ ಸಿನಿಮಾ ದೇಶಾದ್ಯಂತ ಭರ್ಜರಿ ಪ್ರಮೋಷನ್​ ಮಾಡುವ ಯೋಜನೆಯಲ್ಲಿದೆ.