ಬಾಲಿವುಡ್ನ ಯುವ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿ ಎರಡು ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವಿನ ಪ್ರಕರಣ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ಗಳು ಎದುರಾಗುತ್ತಿವೆ. ಅದರಲ್ಲೂ ನಟಿ ಕಂಗನಾ ರಣಾವತ್ ಸ್ವಜನಪಕ್ಷಪಾತವನ್ನೇ ಗುರಿಯನ್ನಾಗಿಸಿಕೊಂಡು, ಬಾಲಿವುಡ್ನ ಸ್ಟಾರ್ ಕುಟುಂಬಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಕಂಗನಾ ಅವರ ಈ ನಡೆಯನ್ನು ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಖಂಡಿಸಿದ್ದಾರೆ.
ಇದನ್ನೂ ಓದಿ: ಎಸ್.ಪಿ.ಬಿಗೆ ಕರೊನಾ ಹರಡಲು ನಾನಲ್ಲ ಕಾರಣ …
‘ತನ್ನ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು, ಅವುಗಳನ್ನೇ ಬಂಡವಾಳವಾಗಿಸಿಕೊಂಡು ತಮಗೆ ಸಮಸ್ಯೆ ಮಾಡಿದವರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೂ ಸುಶಾಂತ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕುಟುಂಬ ನೀಡಿದ ಎಫ್ಐಆರ್ಗೆ ಅವರ ಹೇಳಿಕೆಗಳಿಗೆ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ಕಂಗನಾ ಸುಶಾಂತ್ ಸ್ನೇಹಿತೆಯಲ್ಲ. ಪ್ರತಿನಿಧಿಯೂ ಅಲ್ಲ’ ಎಂದಿದ್ದಾರೆ.
ಅಂದಹಾಗೆ, ಕಳೆದ ಎರಡು ತಿಂಗಳಿಂದ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್, ಕರಣ್ ಜೋಹರ್, ಮಹೇಶ್ ಭಟ್, ಆಲಿಯಾ ಭಟ್, ಸಲ್ಮಾನ್ ಖಾನ್ ಸೇರಿ ಬಹುತೇಕ ಘಟಾನುಘಟಿ ಸ್ಟಾರ್ ನಟರು ಮತ್ತು ಸಿನಿಮಾ ಮೇಕರ್ಗಳನ್ನು ನೇರವಾಗಿ ತಮ್ಮ ಹಳೇ ವೈಷಮ್ಯವನ್ನೇ ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ. (ಏಜೆನ್ಸೀಸ್)