ಮುಂಬೈ: ಬಾಲಿವುಡ್ ಸಿನಿಮಾಗಳಲ್ಲಿ ಡೈನಾಮಿಕ್ ಪಾತ್ರಗಳಿಗೆ ಹೆಸರುವಾಸಿ ನಟಿ ಕಲ್ಕಿ ಕೊಚ್ಲಿನ್(Kalki Koechlin). ನಟಿ ಕಲ್ಕಿ ಬಿಟೌಟ್ ಸಿನಿಮಾ ನಿರ್ಮಾಪಕ ಅನುರಾಗ್ ಕಶ್ಯಪ್ ಅವರನ್ನು ವಿವಾಹವಾಗಿ ವಿಚ್ಛೇದನ ಪಡೆದಿರುವುದು ಗೊತ್ತೆ ಇದೆ. ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಸಮಯದಲ್ಲಿ ನನಗೆ ಉಳಿದುಕೊಳ್ಳಲು ಒಂದು ಮನೆ ಇರಲಿಲ್ಲ ಎಂದು ನಟಿ ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಕಲ್ಕಿ ಕೊಚ್ಲಿನ್ ತನ್ನ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದಾಗ ವೈಯಕ್ತಿಕ ಜೀವನದಲ್ಲಿ ಹೇಗೆ ಕಷ್ಟ ಅನುಭವಿಸಿದೆ ಎಂಬುದನ್ನು ಹೇಳಿದ್ದಾರೆ. ನಾನು ಮತ್ತು ಅನುರಾಗ್ ವಿಚ್ಛೇದನ ಪಡೆದಾಗ ನನ್ನ ಎರಡು ಸಿನಿಮಾಗಳು ಬಿಡುಗಡೆಯಾದವು. ಜಿಂದಗಿ ನಾ ಮಿಲೇಗಿ ದೋಬಾರಾ ಮತ್ತು ಯೇ ಜವಾನಿ ಹೈ ದೀವಾನಿ ಸೂಪರ್ ಹಿಟ್ ಆದವು. ಅದೇ ಸಮಯದಲ್ಲಿ ನಾವು ವಿಚ್ಛೇದನ ಪಡೆದವು ಎಂದಿದ್ದಾರೆ.
ವಿಚ್ಛೇದನದ ಸಮಯದಲ್ಲಿ ಮುಂಬೈನಲ್ಲಿ ವಾಸಿಸಲು ನನಗೆ ಸ್ಥಳವನ್ನು ಹುಡುಕಲು ಸಾಧ್ಯವಾಗಲಿಲ್ಲ. ಆಗ ನನಗೆ ವಾಸಿಸಲು ಒಂದು ಜಾಗ ಸಿಗಲಿಲ್ಲ. ಒಂಟಿಯಾಗಿದ್ದ ನನಗೆ ಯಾರು ಮನೆ ನೀಡುತ್ತಿರಲಿಲ್ಲ. ಸಿನಿಮಾ ರಿಲೀಸ್ ಆಗಿ ನಾನು ಫೇಮಸ್ ಆದರೂ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಜನರು ಬಾಡಿಗೆಗೆ ಮನೆ ಕೇಳಿದರೆ ಕೊಡುತ್ತಿರಲಿಲ್ಲ ಎಂದು ಹೇಳಿದರು.
2008ರಲ್ಲಿ ಅನುರಾಗ್ ಅವರ ದೇವ್.ಡಿ ಚಿತ್ರದ ಮೂಲಕ ಕಲ್ಕಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಶೀಘ್ರದಲ್ಲೇ ಡೇಟಿಂಗ್ ಪ್ರಾರಂಭಿಸಿದ ಇಬ್ಬರು 2011ರಲ್ಲಿ ವಿವಾಹವಾದರು. ಆದ್ರೆ ಎರಡು ವರ್ಷಗಳಲ್ಲೇ ಅಂದರೆ 2013ರಲ್ಲಿ ವಿಚ್ಛೇದನ ಪಡೆದು ಬೇರ್ಪಟ್ಟರು. ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗಿನ ವಿಚ್ಛೇದನದ ಬಳಿಕ ನಟಿ ಕಲ್ಕಿ ಕೊಚ್ಲಿನ್ ಹರ್ಷ್‌ಬರ್ಗ್ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ ಸಫೊ ಎಂಬ ಮಗಳಿದ್ದಾಳೆ. ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಕಲ್ಕಿ ಕೊನೆಯದಾಗಿ ಗೋಲ್ಡ್ ಫಿಶ್ ಮತ್ತು ಖೋ ಗಯೇ ಹಮ್ ಕಹಾನ್ ನಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)