ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಹಾಡಹಗಲೇ ಜೋಡಿ ಕೊಲೆಯಾಗಿದ್ದು, ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆದರೆ ಕೊಲೆ ಆರೋಪಿ ಜೋಕರ್ ಫೆಲಿಕ್ಸ್ ಮಾತ್ರ ಘಟನೆಯ ಸುದ್ದಿಯನ್ನು ಸ್ಟೇಟಸ್ಗೆ ಕೆಜಿಎಫ್ ಮ್ಯೂಸಿಕ್ ಜತೆ ಅಪ್ಲೋಡ್ ಮಾಡಿದ್ದಾನೆ!
ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಇಒ ವಿನು ಕುಮಾರ್ ಕೊಲೆಯಾದವರು. ಈ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಎಒ ವಿನು ಕುಮಾರ್ 2022ರಲ್ಲಿ ತಾವೇ ಒಂದು ಕಂಪನಿಯನ್ನು ಶುರು ಮಾಡಿದ್ದರು. ಈ ಕಂಪನಿ ಅಮೃತಹಳ್ಳಿ ಬಳಿಯ ಪಂಪ ಲೇಔಟ್ನಲ್ಲಿದ್ದು ಕೇವಲ ಏಳು ಎಂಟು ತಿಂಗಳಲ್ಲಿ ಸಾಕಷ್ಟು ಲಾಭ ಕಂಡಿದ್ದರು. ಈ ಕೊಲೆ ಆರೋಪಿ ಜೋಕರ್ ಫೆಲಿಕ್ಸ್ನನ್ನು ಆಗ ಫಣೀಂದ್ರ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎನ್ನಲಾಗಿದೆ.