ಲಖನೌ: ಎನ್ಎಫ್ಎಲ್ನ ಇಂಡಿಯನ್ ಕೌನ್ಸಿಲ್ ಫಾರ್ ಫರ್ಟಿಲೈಸರ್ಸ್ ಆ್ಯಂಡ್ ಫರ್ಟಿಲೈಸರ್ ಟೆಕ್ನಾಲಜಿ ರಿಸರ್ಚ್ (ಐಸಿಎಫ್ಎಫ್ಟಿಆರ್), ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಲಯ ಮತ್ತು ಹುದ್ದೆ ಸಂಖ್ಯೆ: ಕೈಗಾರಿಕಾ ಸಂಶೋಧನೆ-1 ಹುದ್ದೆ ಇದೆ. ಯಾವುದೇ ವಿಭಾಗದಲ್ಲಿ ಬಿ.ಟೆಕ್ ಶೇ. 50 ಅಂಕಗಳೊಂದಿಗೆ ಪಾಸಾಗಿರಬೇಕು.
ಇದನ್ನೂ ಓದಿ: ಮತ್ತೇನಾಗುತ್ತೆ ನೀಟ್, ಜೆಇಇ ಭವಿಷ್ಯ? ಸುಪ್ರೀಂ ಕೋರ್ಟ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ರಾಜ್ಯಗಳು
ಹೊಸ ಮತ್ತು ನಾವೀನ್ಯ ರಸಗೊಬ್ಬರ ಮತ್ತು ರಸಗೊಬ್ಬರ ತಂತ್ರಜ್ಞಾನ ಸಂಶೋಧನೆ-1 ಹುದ್ದೆ ಇದೆ. ರಸಾಯನಶಾಸ್ತ್ರ ವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಬಿಎಸ್ಸಿ ಅಥವಾ ಕೃಷಿ ಪದವಿಯನ್ನು ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು.
ಕೃಷಿಕರ ಕಲ್ಯಾಣ ಕುರಿತು ಸಂಶೋಧನೆ-1 ಹುದ್ದೆ ಇದೆ. ಶೇ 50 ಅಂಕಗಳೊಂದಿಗೆ ಸಾಮಾಜಿಕ ವಿಜ್ಞಾನ ಪದವಿ ಪಾಸಾಗಿರಬೇಕು.
ಒಂದು ವರ್ಷ ಆಯಾ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 35 ವರ್ಷ.
ಮಾಸಿಕ ವೇತನ (ಸಂಚಿತ) 35,000/- ರೂ. ಇರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನ ಏರ್ಪಡಿಸಲಾಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಬರೆದು ಸೆಪ್ಟೆಂಬರ್ 14 ರೊಳಗೆ Director General (ICFFTR), C/o National Fertilizers Limited, A-11, Sector-24, Noida, District Gautam Budh Nagar, Uttar Pradesh -201301 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಮಾಹಿತಿಗೆ https://www.nationalfertilizers.com ಸಂಪರ್ಕಿಸಬಹುದು.