ನ್ಯೂಸ್

ರಾಮ್​ಚರಣ್​ ಜೋಡಿಯಾಗಿ ಜಾಹ್ನವಿ..ಅಧಿಕೃತವಾಗಿ ಪ್ರಕಟಿಸಿದ ತಂಡ

ಹೈದರಾಬಾದ್​ : ಶ್ರೀದೇವಿ ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟು ಒಳ್ಳೆಯ ಹೆಸರು ಮಾಡುತ್ತಿರುವ ಜಾಹ್ನವಿ ಕಪೂರ್, ಬಾಲಿವುಡ್ ಜೊತೆಗೆ ಟಾಲಿವುಡ್ ನಲ್ಲೂ ಸಾಲು ಸಾಲು ಅವಕಾಶಗಳು ಬರುತ್ತಿವೆ. ಈಗಾಗಲೇ ಬಿಟೌನ್‌ನಲ್ಲಿ ಬ್ಯುಸಿಯಾಗಿರುವ ಅವರು ತೆಲುಗಿನಲ್ಲೂ ಮತ್ತೊಬ್ಬ ಟಾಪ್ ಹೀರೋ ಎದುರು ಕಾಣಿಸಿಕೊಳ್ಳಲಿದ್ದಾರೆ. ‘ಉಪ್ಪೇನ’ ಖ್ಯಾತಿಯ ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್ ಚರಣ್ ಸಿನಿಮಾ ಮಾಡಲಿರುವುದು ಗೊತ್ತೇ ಇದೆ. ಇದನ್ನು ಆರ್​ಸಿ 16 ಶೀರ್ಷಿಕೆಯೊಂದಿಗೆ ಪ್ರಚಾರ ಮಾಡಲಾಗುತ್ತಿದೆ. ಜಾಹ್ನವಿ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ಮಾಣ ಸಂಸ್ಥೆ ಪೋಸ್ಟರ್ ಬಿಡುಗಡೆ ಮಾಡಿದೆ.

ತಂಡವು ಜಾಹ್ನವಿ ಕಪೂರ್ ಗೆ ಜನ್ಮದಿನದ ಶುಭಾಶಯಗಳನ್ನು ಕೋರಿತು ಮತ್ತು ಚಿತ್ರದಲ್ಲಿ ಪಾಲ್ಗೊಳ್ಳುವುದಕ್ಕೆ ಸ್ವಾಗತಿಸಿತು. ತೆಲುಗಿನಲ್ಲಿ ಜಾಹ್ನವಿ ಕಪೂರ್ ಗೆ ಎರಡನೇ ಚಿತ್ರ ಇದಾಗಿದೆ.

ಸದ್ಯ ಇದರ ಪ್ರಿ-ಪ್ರೊಡಕ್ಷನ್ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ. ಈ ಚಿತ್ರ ಕ್ರೀಡಾ ಹಿನ್ನೆಲೆಯಲ್ಲಿ ಬರಲಿದೆ. ಮೈತ್ರಿ ಮೂವಿ ಮೇಕರ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಇನ್ನೊಂದೆಡೆ ಜಾಹ್ನವಿ ಕಪೂರ್ ‘ದೇವರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಲ್ಲಿ ಎನ್ ಟಿಆರ್ ನಾಯಕನಾಗಿ ಮತ್ತು ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.‘ದೇವರ ಭಾಗ-1’ ಶೀರ್ಷಿಕೆಯ ಮೊದಲ ಭಾಗ ಏಪ್ರಿಲ್ 5 ರಂದು ತೆರೆಗೆ ಬರಲಿದೆ.