ನ್ಯೂಸ್

ಅಪ್ಪನಿಗೆ ಹುಟ್ಟಿದ್ರೆ ನನ್ನ ಎದುರು ಬಂದು... ಜಗದೀಶ್​ಗೆ Bigg Boss ಲೇಡಿ ಸ್ಫರ್ಧಿ ಸವಾಲು

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ ಆವೃತ್ತಿ (Bigg Boss 11th Season) ಆರಂಭವಾಗಿ ಎರಡು ವಾರಗಳಾಗಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ಸ್ವರ್ಗ-ನರಕ ಥೀಮ್​ನಲ್ಲಿ (Hell-heaven) ಆರಂಭವಾದ ಕಾರ್ಯಕ್ರಮವು ಹೆಚ್ಚು ಸೌಂಡ್​ ಮಾಡಿದ್ದು ವಿವಾದಗಳಿಂದಲೇ (Controversy) ಎಂದರೆ ತಪ್ಪಾಗಲಾರದು. ಇದರಲ್ಲಿ ಹೆಚ್ಚು ಸದ್ದು ಮಾಡಿದ್ದು, ಜಗದೀಶ್​ (Jagadish) ಎಂದರೆ ತಪ್ಪಾಗಲಾರದು. ಎರಡನೇ ವಾರ ಸ್ವಲ್ಪ ಸೈಲೆಂಟಾಗಿದ್ದ ಜಗದೀಶ್​ (jagadish) ಇದೀಗ ಮನೆಯ ಸ್ಫರ್ಧಿ ಚೈತ್ರಾ (Chaitra Kundapura) ಅವರೊಂದಿಗೆ ಜಗಳವಾಡಿದ್ದು, ಪ್ರೋಮೋ ಸಖತ್​ ವೈರಲ್​ ಆಗಿದೆ.

ಮೊದಲ ವಾರ ಬಿಗ್​ಬಾಸ್​ಗೆ (Bigg Boss)ಸವಾಲು ಹಾಕುವ ಮೂಲಕ, ಸ್ಫರ್ಧಿಗಳ ಜೊತೆ ಜಗಳವಾಡುತ್ತ ವಾರದ ಕೊನೆಯಲ್ಲಿ ನಿರೂಪಕ ಕಿಚ್ಚ ಸುದೀಪ್​ (Kichcha Sudeep) ಅವರಿಂದ ಸಖತ್​ ಆಗಿ ಬೈಸಿಕೊಂಡಿದ್ದ ಜಗದೀಶ್​ (jagadish) ಎರಡನೇ ವಾರ ಲವರ್​ ಬಾಯ್​ (Lover Boy) ಅವತಾರದಲ್ಲಿ ಪ್ರೇಕ್ಷಕರಿಗೆ ಸಖತ್​ ಮನರಂಜನೆ ನೀಡಿದ್ದರು. ಮನೆಯ ಕ್ಯಾಪ್ಟನ್​ ಹಂಸಾ (Hamsa) ಅವರನ್ನು ರೇಗಿಸುತ್ತಾ ಸಖತ್​ ಎಂಟರ್​ಟೈನ್​ಮೆಂಟ್​ ನೀಡಿದ್ದ ಜಗದೀಶ್​ (jagadish) ಇದೀಗ ಸ್ಫರ್ಧಿ ಚೈತ್ರಾ (Chaitra Kundapura) ಅವರೊಟ್ಟಿಗೆ ಕಿತ್ತಾಡಿಕೊಂಡಿದ್ದು, ಮಾತುಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿದೆ.

ನೀನಾ? ನಾನಾ? ಅಂತ ವಾಗ್ಯುದ್ಧಕ್ಕೆ ನಿಂತ ಜಗದೀಶ್‌ ಹಾಗೂ ಚೈತ್ರಾ ಪ್ರೋಮೋ ನೋಡುವುದಾದರೆ ಆಕೆ ಏನ್​ ಮಾತಾಡ್ತಾ ಇದ್ದಾಳೆ ಎಂದು ಶುರುವಾಗಲಿದ್ದು, ಇದಕ್ಕೆ ರಿಪ್ಲೈ ಮಾಡುವ ಚೈತ್ರ ನನ್ನ ಎದುರಿಗೆ ನಿಲ್ಲುವ ತಾಕತ್​ ಇಲ್ಲ ಎಂದು ಹೇಳುತ್ತಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಜಗದೀಶ್​ (Jagadish) ನನಗೆ ಫಾಲೋವರ್ಸ್ ಇದಾರೆ. ಆಕೆ ಮೇಲೆ 28 ಕೇಸ್ ಇದೆ. ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಅಧಿಕಾರ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ. ಅಪ್ಪನಿಗೆ ಹುಟ್ಟಿದ್ರೆ ನನ್ನ ಎದುರು ಬಂದು ಮಾತನಾಡಲಿ ಎಂದು ಹೇಳಿದ್ಧಾರೆ. ಈ ಪ್ರೋಮೋ (Promo) ಸಖತ್​ ವೈರಲ್​ ಆಗುತ್ತಿದೆ.

2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಮೂಲದ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸೋ ಭರವಸೆ ನೀಡಿ ಹಣ ಪಡೆದ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲಾಗಿತ್ತು. ಈ ಕೇಸ್​ನಲ್ಲಿ ಅವರು ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಇತ್ತೀಚೆಗೆ ಅವರು ಬಿಗ್​ಬಾಸ್​ (Bigg Boss) ಮನೆಗೆ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು.