Embassy: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಈ ಪ್ರದೇಶದ ಭಾರತೀಯ ಪ್ರಜೆಗಳಿಗೆ ಸಲಹೆಯನ್ನು ನೀಡಿದೆ.
ಈ ವಾರದ ಆರಂಭದಿಂದ ರಾಯಭಾರ ಕಚೇರಿಯು ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸಲಹೆಯನ್ನು ನೀಡಿ ಜಾಗರೂಕರಾಗಿರಲು ಒತ್ತಾಯಿಸಿದೆ.
ಈ ಕುರಿತು ಸಾಮಾಜಿಕ ವೇದಿಕೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, "ಇರಾನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಜಾಗರೂಕರಾಗಿರಲು ಸೂಚಿಸಿದೆ. ಅನಗತ್ಯ ಚಲನೆಯನ್ನು ತಪ್ಪಿಸಲು ಕೂಡ ಸೂಚಿಸಿದೆ. ಅಲ್ಲದೆ, ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅನುಸರಿಸಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸಲು ವಿನಂತಿಸಿದೆ".
+98 9128109115 ಮತ್ತು +98 9128109109
ಕರೆ ಮಾಡಲು ಮಾತ್ರ - +98 9128109115 ಮತ್ತು +98 9128109109
WhatsAppಗೆ - +98 901044557, +98 9015993320, ಮತ್ತು, +91 8086871709.
ಬಂದರ್ ಅಬ್ಬಾಸ್: +98 9177699036
ಜಹೇದನ್: +98 9396356649 ಸಂಪರ್ಕಿಸಲು ಸೂಚಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ, ಮೊದಲ ಎರಡು ದಿನಗಳ ಇಸ್ರೇಲ್ ದಾಳಿಯಲ್ಲಿ ಒಟ್ಟು 80 ಮಂದಿ ಸಾವಿಗೀಡಾಗಿದ್ದಾರೆ. ಟೆಹ್ರಾನ್ನ ಬೃಹತ್ ಕಟ್ಟಡಗಳು ಛಿದ್ರಗೊಂಡಿದ್ದು, ಮೇಲಿನ ಮಹಡಿಗಳು ಕುಸಿದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಇರಾನ್ನ ಪ್ರಮುಖ ಸ್ಥಳಗಳನ್ನೇ ಗುರಿಯಾಗಿಸಿಕೊಂಡಿರುವ ಇಸ್ರೇಲ್, ನಿರಂತರ ಕ್ಷಿಪಣಿ ದಾಳಿಯ ಮೂಲಕ ಜನರ ಪ್ರಾಣ ಕಸಿದುಕೊಳ್ಳುತ್ತಿದೆ.(ಏಜೆನ್ಸೀಸ್)