ನ್ಯೂಸ್

Met Gala 2023: ಇಶಾ ಅಂಬಾನಿ ಬಳಿ ಇರುವ ಈ ಬ್ಯಾಗ್​ ಬೆಲೆ ಗೊತ್ತಾದರೆ ಬೆರಗಾಗ್ತೀರಾ?

ಮುಂಬೈ: ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿರುವ ಮೆಟ್ ಗಾಲಾ 2023 ಅದ್ದೂರಿಯಾಗಿ ನಡೆದಿದೆ. ಈ ಅದ್ದೂರಿ ಈವೆಂಟ್ ನಲ್ಲಿ ಭಾರತೀಯ ಸ್ಟಾರ್ಸ್ ಕೂಡ ಮಿಂಚಿದ್ದಾರೆ. ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಸಹ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದು, ಈ ವೇಳೆ ಇಶಾ ಅವರು ಹಿಡಿದು ಬಂದಿರುವ ಬ್ಯಾಗ್​ ಎಲ್ಲರ ಗಮನ ಸೆಳೆದಿದೆ.

ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ಮೆಟ್ ಗಾಲಾ 2023' ಫ್ಯಾಷನ್ ಈವೆಂಟ್‌ನಲ್ಲಿ ಇಶಾ ಅಂಬಾನಿ ಸಂಪೂರ್ಣ ಕಪ್ಪು ಬಣ್ಣದ ಸ್ಯಾಟಿನ್‌ ಸ್ಯಾರಿ ಗೌನ್‌ನಲ್ಲಿ ಮಿಂಚಿದರು. ಇಶಾ ಅವರ ಸಂಪೂರ್ಣ ಗೌನ್ ಮುತ್ತು ಮತ್ತು ವಜ್ರಗಳಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ನೇಪಾಳಿ-ಅಮೆರಿಕನ್ ಡಿಸೈನರ್ ಪ್ರಬಲ್ ಗುರುಂಗ್ ಅವರ ಕಲೆಕ್ಷನ್‌ನಿಂದ ಈ ಉಡುಪನ್ನು ಧರಿಸಿದ್ದಾರೆ. ಅವರು ತೊಟ್ಟ ಈ ಡ್ರೆಸ್​​ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಅವರ ಕೈಯಲ್ಲಿದ್ದ ಬ್ಯಾಗ್​ ಕೂಡಾ ಆಕರ್ಷಿಸಿದೆ.

ಬ್ಯಾಗ್​​ ವಿಶೇಷತೆ?: ಇಶಾ ಅವರ ಡಿಸೈನರ್ ಬ್ಯಾಗ್ ಭಾರತೀಯ ಸಂಪ್ರದಾಯದ ಮೇಲಿನ ಅವರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಸಾಂಪ್ರದಾಯಿಕ ಭಾರತೀಯ ವಧುವಿನ ಲುಕ್‌ನಿಂದ ಪ್ರೇರಿತಗೊಂಡ ಗೊಂಬೆಯ ಮುಖವನ್ನು ಒಳಗೊಂಡಿರುವ ಕ್ಲಚ್ ಆಗಿದೆ. ಈ ಬ್ಯಾಗ್ ಬೆಲೆ ಬ್ಯಾಗ್ ಬೆಲೆ 24 ಲಕ್ಷ ರೂ. ಆಗಿದೆ.

ಉದ್ಯಮಿ ಮುಕೇಶ್ ಅಂಬಾನಿಯ ಕುಟುಂಬ ಸದಸ್ಯರು ಯಾವಾಗಲೂ ತಮ್ಮ ಬೆಲೆಬಾಳುವ ಡ್ರೆಸ್, ಆಭರಣ ಹಾಗೂ ಆಸೆಸರೀಸ್‌ಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಲಕ್ಷ ಲಕ್ಷ ಕೋಟಿ ಬೆಲೆಬಾಳುವ ಆಭರಣ, ಹ್ಯಾಂಡ್‌ ಬ್ಯಾಗ್‌ಗಳನ್ನು ಹೊದಿರುವುದು ಇದೆ ಮೊದಲೇನು ಅಲ್ಲ. ಆದರೆ ಈ ಬ್ಯಾಗ್​ ವಿನ್ಯಾಸದ ಶೈಲಿ ಸಖತ್​ ವಿಶೇಷವಾಗಿತ್ತು.