More

    ಬರ್ಗರ್‌ನಲ್ಲಿ ಇಲಿಯ ಹಿಕ್ಕೆಗಳು ; ಮೆಕ್‌ಡೊನಾಲ್ಡ್​​ಗೆ 5 ಕೋಟಿ ರೂ. ದಂಡ!

    ಲಂಡನ್​: ಬರ್ಗರ್‌ನಲ್ಲಿ ಇಲಿಯ ಹಿಕ್ಕೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಮೆಕ್‌ಡೊನಾಲ್ಡ್ 5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

    ಲಂಡನ್‌ನ ಔಟ್‌ಲೆಟ್‌ನಿಂದ ಖರೀದಿಸಿದ ಚೀಸ್‌ಬರ್ಗರ್‌ನಲ್ಲಿ ಗ್ರಾಹಕರು ಇಲಿ ಹಿಕ್ಕೆಗಳನ್ನು ಕಂಡುಹಿಡಿದ ನಂತರ ಮೆಕ್‌ಡೊನಾಲ್ಡ್ಸ್‌ಗೆ ಸುಮಾರು 5 ಕೋಟಿ ರೂ. ದಂಡ ವಿಧಿಸಲಾಯಿತು.

    ಇದನ್ನೂ ಓದಿ: ಸ್ಕೂಟಿಯಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಗೆ 1000 ರೂ. ದಂಡ!

    ಹೆಸರು ಹೇಳಲಿಚ್ಛಿಸದ ಗ್ರಾಹಕರು ತಮ್ಮ ಬರ್ಗರ್​​ನ ಒಳಭಾಗದಲ್ಲಿ ಇಲಿಗಳ ಮಲವನ್ನು ಕಂಡುಕೊಂಡಿದ್ದಾರೆ. ನಂತರ ಗ್ರಾಹಕರು ದೂರು ನೀಡಿದ್ದಾರೆ. ಇದರ ಪರಿಣಾಮವಾಗಿ ಲೇಟನ್‌ಸ್ಟೋನ್‌ನಲ್ಲಿರುವ ರೆಸ್ಟೊರೆಂಟ್‌ನಲ್ಲಿ ಇಲಿಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿರುವುದನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅಧಿಕಾರಿಗಳ ತನಿಖೆಯ ನಂತರ ಅಂಗಡಿಯನ್ನು ಮುಚ್ಚಲಾಯಿತು ಎನ್ನಲಾಗಿದೆ.

    ಥೇಮ್ಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ, ಫಾಸ್ಟ್ ಫುಡ್ ದೈತ್ಯ ಆಹಾರ ನೈರ್ಮಲ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5 ಕೋಟಿ ರೂ. ದಂಡವನ್ನು ಪಾವತಿಸಲು ಆದೇಶಿಸಲಾಯಿತು.

    ಇದನ್ನೂ ಓದಿ: ಅವಿವಾಹಿತ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಪಕ್ಷೇತರ ಅಭ್ಯರ್ಥಿ!

    ಜಿಲ್ಲಾ ನ್ಯಾಯಾಧೀಶ ಸುಸಾನ್ ಹೋಲ್ಡಮ್ ಮಾತನಾಡಿ, “ಮೆಕ್‌ಡೊನಾಲ್ಡ್ ಅತ್ಯಂತ ಪ್ರತಿಷ್ಠಿತ ಕಂಪನಿಯಾಗಿದೆ. ಗ್ರಾಹಕರು ಮೆಕ್‌ಡೊನಾಲ್ಡ್ಸ್‌ಗೆ ಹೋದಾಗ, ಅವರು ಆಹಾರ ನೈರ್ಮಲ್ಯದಲ್ಲಿ ಅತ್ಯುನ್ನತ ಗುಣಮಟ್ಟವನ್ನು ನಿರೀಕ್ಷಿಸುತ್ತಾರೆ ಮತ್ತು ನಿರೀಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ. ಶುಚಿಯಾದ ಹಾಗೂ ಉತ್ತಮ ಆಹಾರ ಸುರಕ್ಷತೆ ನೀಡುವುದು ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

    ಮ್ಯಾಕ್‌ಡೊನಾಲ್ಡ್‌ನ ವಕ್ತಾರರು ಕಂಪನಿಯು ನೈರ್ಮಲ್ಯದ ಘಟನೆಗಾಗಿ ಮತ್ತು ಯಾವುದೇ ಅಸಮಾಧಾನಕ್ಕೆ ಕ್ಷಮೆಯಾಚಿಸಿದೆ. ನಾವು ಆರೋಗ್ಯ, ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯದ ಉನ್ನತ ಗುಣಮಟ್ಟಕ್ಕೆ ಬದ್ಧರಾಗಿದ್ದೇವೆ.  ನಮ್ಮ ಎಲ್ಲಾ ರೆಸ್ಟೊರೆಂಟ್‌ಗಳಲ್ಲಿ ನಾವು ಈಗಾಗಲೇ ಈ ಕುರಿತಾಗಿ ನಿರ್ದೇಶನ ನೀಡಿದ್ದೇವೆ. ನಾವು ಆರೋಗ್ಯ, ಸುರಕ್ಷತೆ ಮತ್ತು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯೊಂದಿಗೆ ಮಾಡುತ್ತೇವೆ ಎಂದಿದ್ದಾರೆ.

    ಡಿ.ಕೆ.ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್​​ ಬಳಿ ಕಾಣಿಸಿಕೊಂಡ ಬೆಂಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts