ಹೊಸದಿಲ್ಲಿ: ಐಆರ್‌ಸಿಟಿಸಿಯ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರಿಗೆ ಮುಂಚಿತವಾಗಿ ಆರ್ಡರ್ ಮಾಡಲಾದ ಆಹಾರಗಳನ್ನು ಪೂರೈಕೆ ಮತ್ತು ವಿತರಣೆಗಾಗಿ ಸ್ವಿಗ್ಗಿ ಫುಡ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಗುರುವಾರ ಪ್ರಕಟಣೆ ಮೂಲಕ ತಿಳಿಸಿದೆ. ಮೊದಲ ಹಂತದ ಭಾಗವಾಗಿ ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದಿದೆ.
"ಐಆರ್‌ಸಿಟಿಸಿ ಬಂಡ್ಲ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ (ಸ್ವಿಗ್ಗಿ ಫುಡ್ಸ್) ಜತೆಗೆ IRCTC ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಮುಂಗಡ-ಆರ್ಡರ್ ಮಾಡಿದ ಊಟವನ್ನು ಸರಬರಾಜು ಮಾಡಲು ಮತ್ತು ತಲುಪಿಸಲು ನಾಲ್ಕು ರೈಲು ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ PoC (ಪರಿಕಲ್ಪನೆಯ ಪುರಾವೆ) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ನಿಲ್ದಾಣಗಳಲ್ಲಿ ಈ ಸೇವೆ ಪ್ರಾರಂಭಗೊಳ್ಳಲಿದ್ದು, ಬಂಡಲ್ ಟೆಕ್ನಾಲಜೀಸ್ ಪ್ರೈವೇಟ್ ಮೂಲಕ ಇ-ಕ್ಯಾಟರಿಂಗ್ ಸೇವೆ ಶುರುವಾಗಲಿದೆ ಎಂದು ಐಆರ್‌ಸಿಟಿಸಿ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಗುರುವಾರ 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆದ ಷೇರುಗಳು: ಶುಕ್ರವಾರವೂ ಈ ಸ್ಟಾಕ್ನಲ್ಲಿ ಭಾರೀ ಲಾಭದ ನಿರೀಕ್ಷೆ
ಗುರುವಾರ (ಫೆ.22) ಐಆರ್‌ಸಿಟಿಸಿಯ ಷೇರುಗಳು 1.04% ಏರಿಕೆಯಾಗಿ ಪ್ರತಿ ಈಕ್ವಿಟಿ ಷೇರಿಗೆ 935.95ಕ್ಕೆ ತಲುಪಿದೆ. ಸ್ವಿಗ್ಗಿ ಮತ್ತು IRCTC ನಡುವಿನ ಸಹಯೋಗವು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ವಿತರಣಾ ಅಪ್ಲಿಕೇಶನ್‌ನ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).